Friday, March 29, 2024
spot_imgspot_img
spot_imgspot_img

ಪುತ್ತೂರಿನಲ್ಲಿ ಮತ್ತೊಂದು ಮಾರುತಿ ಓಮ್ನಿ ಕಳವು

- Advertisement -G L Acharya panikkar
- Advertisement -

ಪುತ್ತೂರು: ಕಳೆದ ಕೆಲವು ವಾರದೊಳಗೆ ಮಾರುತಿ ಕಾರು, ಎರಡು ಮಾರುತಿ ಓಮ್ನಿ ಕಳವಿನ ಬೆನ್ನಲ್ಲೇ ಇದೀಗ ನ.14ರಂದು ಇನ್ನೊಂದು ಮಾರುತಿ ಓಮ್ನಿ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಭುವನೇಂದ್ರ ಕಲ್ಯಾಣ ಮಂಟಪದ ಹಿಂದುಗಡೆ ಮೋಹನ್ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಕಾಮತ್ ಸ್ವೀಟ್ ಸ್ಟಾಲ್ ಹೊಂದಿರುವ ಮಂಜುನಾಥ್ ಕಾಮತ್ ಎಂಬವರ ಮಾಲಕತ್ವದ ಮಾರುತಿ ಓಮ್ನಿ(ಕೆ.ಎ21 ಪಿ 8826) ಕಳವಾಗಿದೆ. ಅವರು ಬೆಳಿಗ್ಗೆ ಮೋಹನ್ ಗ್ಯಾರೇಜ್ ಬಳಿ ತಮ್ಮ ಮಾರುತಿ ಓಮ್ನಿ ಪಾರ್ಕ್ ಮಾಡಿದ್ದರು. ರಾತ್ರಿ ವೇಳೆ ಅವರು ಹೋಗಿ ನೋಡಿದಾಗ ಅಲ್ಲಿ ಮಾರುತಿ ಓಮ್ನಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!