Monday, May 20, 2024
spot_imgspot_img
spot_imgspot_img

ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಯುಟ್ಯೂಬ್ ಜೋಡಿ

- Advertisement -G L Acharya panikkar
- Advertisement -

ಸೋಶಿಯಲ್ ಮಿಡಿಯಾ ಜೋಡಿಯೊಂದು ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದ ಬಹದ್ದೂರ್‌ಗಢದ ರುಹಿಲ್ ರೆಸಿಡೆನ್ಸಿಯಲ್ಲಿ ನಡೆದಿದೆ.

ಮೃತರನ್ನು ಗರ್ವಿತ್ (25) ಮತ್ತು ನಂದಿನಿ (22) ಎಂದು ಗುರುತಿಸಲಾಗಿದೆ.

ಮೃತ ಜೋಡಿ ತಮ್ಮ ಯೂಟ್ಯೂಬ್ ಚಾನೆಲ್ ನಿರ್ವಹಣೆ ಮತ್ತು ಕಿರುಚಿತ್ರಗಳನ್ನು ರಚಿಸುವಲ್ಲಿ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ, ಅವರು ತಮ್ಮ ತಂಡದೊಂದಿಗೆ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಸ್ಥಳಾಂತರಗೊಂಡಿದ್ದರು. ಏಳನೇ ಮಹಡಿಯಲ್ಲಿ ಬಾಡಿಗೆಗೆ ತಮ್ಮ ತಂಡದ ಸರಿಸುಮಾರು ಐದು ಮಂದಿಯೊಂದಿಗೆ ವಾಸಿಸುತ್ತಿದ್ದರು. ಪೊಲೀಸರ ಪ್ರಕಾರ, ಚಿತ್ರೀಕರಣದಿಂದ ತಡರಾತ್ರಿ ಮನೆಗೆ ಹಿಂದಿರುಗಿದ ನಂತರ, ಜೋಡಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ನಂತರ ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!