Thursday, August 27, 2026
spot_imgspot_img
spot_imgspot_img

ಎರಡು ವರ್ಷಗಳ ಬಳಿಕ ಕಾಣೆಯಾಗಿದ್ದ ಮಹಿಳೆ-ಬಾಲಕ ಪತ್ತೆ

- Advertisement -
- Advertisement -

ಬಳ್ಳಾರಿ: ಸುಮಾರು ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಹಾಗೂ ಅಪ್ರಾಪ್ತ ಬಾಲಕನನ್ನು ಬಳ್ಳಾರಿ ಎಎಚ್‌ಟಿಯು ತಂಡ ಪತ್ತೆ ಮಾಡಿ ಕುಟುಂಬಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.

2023ರ ಅ.10ರಂದು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಬಾಲಕ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಬಳ್ಳಾರಿ ಎಎಚ್‌ಟಿಯು ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ತನಿಖೆ ಮುಂದುವರೆಸಿದ ಎಎಚ್‌ಟಿಯು ತಂಡವು 2026ರ ಎ.27ರಂದು ಆಂಧ್ರಪ್ರದೇಶದ ವಿಜಯವಾಡ ನಲ್ಲಿ ಕಾಣೆಯಾಗಿದ್ದ ರಾಧಾ (25) ಹಾಗೂ ಅವರ 7 ವರ್ಷದ ಮಗನನ್ನು ಪತ್ತೆ ಮಾಡಿದೆ.

ಎಎಚ್‌ಟಿಯು ಪಿಐ ರಮೇಶ್ ಕುಲಕರ್ಣಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ವಿ. ಮಾರುತಿ, ರಾಮಲಿಂಗಪ್ಪ ಹಾಗೂ ನೂರ್ ಜಹಾನ್ ಕಾರ್ಯಾಚರಣೆ ನಡೆಸಿ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಪತ್ತೆ ಮಾಡಿದ್ದಾರೆ. ನಂತರ ಅವರನ್ನು ದೂರುದಾರರ ಕುಟುಂಬಕ್ಕೆ ಒಪ್ಪಿಸಲಾಗಿದೆ.

ಸುಮಾರು ಎರಡು ವರ್ಷಗಳ ಬಳಿಕ ಮಹಿಳೆ ಹಾಗೂ ಮಗುವನ್ನು ಪತ್ತೆ ಮಾಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!