Saturday, June 28, 2025
spot_imgspot_img
spot_imgspot_img

ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ದಾಳಿ; 64 ಯುವಕರು ಮತ್ತು 24 ಯುವತಿಯರು ಪತ್ತೆ.!

- Advertisement -
- Advertisement -

ಬೆಂಗಳೂರು: ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿಯ ಔಟರ್ ರಿಂಗ್ ರಸ್ತೆಯಲ್ಲಿರೋ ಐಷಾರಾಮಿ ಹೋಟೆಲ್ ಮೇಲೆ ನಡೆದ ದಾಳಿ ವೇಳೆ 64 ಯುವಕರು ಮತ್ತು 24 ಯುವತಿಯರು ಪತ್ತೆಯಾಗಿದ್ದಾರೆ.

ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಪಾರ್ಟಿ ಆರ್ಗನೈಸ್ ಮಾಡಿದ್ದ. ಅವಧಿಗೂ ಮೀರಿ ಪಾರ್ಟಿ ನಡೆಯುತ್ತಿತ್ತು. ಬೆಳಗ್ಗಿನಜಾವ 3.30 ತನಕ ನಡೆಯುತ್ತಿದ್ದ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿದೆ. ಸೌತ್ ಪಾರ್ಟಿಯಲ್ಲಿ ಯುವಕ, ಯುವತಿಯರು ಮತ್ತಿನಲ್ಲಿ ಕುಣಿದು ಕುಪ್ಪಳಿಸ್ತಿದ್ರು.

ಪಾರ್ಟಿಯಲ್ಲಿ ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚು ಮಂದಿ ಇದ್ದರು. ಆರ್ಗನೈಸರ್ ಯುವಕರಿಗೆ 400, ಯುವತಿಯರಿಗೆ 300 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದ. ಪಾರ್ಟಿಯಲ್ಲಿ ಡ್ರಗ್ಸ್ ಇರುವ ಅನುಮಾನ ಇತ್ತ. ಆದರೆ ಹೋಟೆಲ್ ನಲ್ಲಿ ಡ್ರಗ್ಸ್ ದೊರೆತಿಲ್ಲ ಬದಲಾಗಿ ಪಾರ್ಟಿಯಲ್ಲಿದ್ದವರು ನಶೆಯಲ್ಲಿರೋ ಮಾಹಿತಿ ದೊರೆತಿದೆ.

ಸದ್ಯ ಪಾರ್ಟಿಯಲ್ಲಿದ್ದವರನ್ನ ಮೆಡಿಕಲ್ ಚೆಕಪ್ ಮಾಡಿಸಲು ಸಿಸಿಬಿ ಪೊಲೀಸ್ರು ಮುಂದಾಗಿದ್ದಾರೆ. ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!