Tuesday, April 30, 2024
spot_imgspot_img
spot_imgspot_img

ಆರೋಗ್ಯ ಸಮಸ್ಯೆಗಳು ಬರಬಾರದೆಂದರೆ ಇಂತಹ ಚಹಾಗಳನ್ನು ಕುಡಿಯಲೇಬೇಕು..!

- Advertisement -G L Acharya panikkar
- Advertisement -

ಮನೆಯ ಹೊರಗಡೆ ಕಾಲಿಡಲು ಸಾಧ್ಯವಾಗದಷ್ಟು ಜಿಟಿಜಿಟಿ ಸುರಿಯುವ ಮಳೆ, ತಣ್ಣನೆಯ ವಾತಾವರಣ, ಹಾಗೆಯೇ ಬೆಡ್ ಶೀಟ್ ಹೊದ್ದು ಮಲಗಿಕೊಳ್ಳಬೇಕು ಎನ್ನುವ ಮನಸ್ಸು, ಪ್ರತಿದಿನ ಇಷ್ಟಪಟ್ಟು ತಿನ್ನುತ್ತಿದ್ದ ರಸ್ತೆ ಬದಿಯ ಬೇಲ್‌ಪುರಿ, ಮಸಾಲೆ ಪುರಿ, ಪಾನಿ ಪುರಿ, ಬೇಕೆಂದರೂ ಸಿಗುವುದಿಲ್ಲ ಎನ್ನುವ ನಿರಾಸೆ, ಜೊತೆಗೆ ಒಂದಿಷ್ಟು ಕೆಲಸ ಕಾರ್ಯಗಳು ಕೂಡ, ಈ ಸಂದರ್ಭದಲ್ಲಿ ಪೆಂಡಿಂಗ್ ಉಳಿಯುವುದು. ಇದೆಲ್ಲಾ ಮಳೆಗಾಲದ ಸಂದರ್ಭದ ಒಂದು ಝಲಕ್ ಅಷ್ಟೇ!

ಇನ್ನು ಮಳೆಗಾಲ ಎಂದರೆ ಕೇಳಬೇಕಾ? ಶೀತ, ನೆಗಡಿ, ಕೆಮ್ಮು, ಜ್ವರ ಇವೆಲ್ಲಾ ನಮಗಾಗಿ ಹೊಂಚು ಹಾಕಿ ಕಾಯುತ್ತಿರುತ್ತವೆ! ಹೀಗಾಗಿ ಈ ಸಮಯದಲ್ಲಿ ಎಷ್ಟು ಸಾಧ್ಯವೋ, ಅಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡರೆ, ಒಳ್ಳೆಯದು. ಮುಖ್ಯವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಆಹಾರ ಪದಾರ್ಥಗಳು ಇಲ್ಲಾಂದ್ರೆ ಗಿಡಮೂಲಿಕೆಯ ಪಾನೀಯಗಳನ್ನು ಅಥವಾ ಚಹಾಗಳನ್ನು ಸೇವಿ ಸುವ ಅಭ್ಯಾಸ ಮಾಡಿ ಕೊಂಡರೆ, ಒಳ್ಳೆಯದು. ಅಲ್ಲದೆ ಮನೆಯಲ್ಲಿ ಹಿರಿಯರು ಅನುಸರಿಸಿಕೊಂಡು ಬರುವಂತಹ ಆರೋಗ್ಯಕಾರಿ ಸಂಗತಿಗಳನ್ನು, ನಾವೂ ಕೂಡ ಅನುಸರಿ ಸಬೇಕು.

ಮನೆಯಲ್ಲಿರುವ ಹಿರಿಯರಿಂದ ಹಲವಾರು ಆರೋಗ್ಯ ಟಿಪ್ಸ್‌ಗಳು ನಮಗೆ ಈ ಸಂದರ್ಭದಲ್ಲಿ ಸಿಗುತ್ತವೆ. ನಮ್ಮ ದೇಹಕ್ಕೆ ಯಾವುದು ಅನು ಕೂಲಕರ ಆಗಿರುತ್ತದೆ ಅಂತಹ ಟಿಪ್ಸ್‌ನ್ನು ನಾವು ಅನುಸರಿ ಸುವ ಅಭ್ಯಾಸ ಮಾಡಿಕೊಳ್ಳಬೇಕು. ಬನ್ನಿ ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ನಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುವ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲ ಪಡಿಸುವ, ಕೆಲವೊಂದು ಆರೋಗ್ಯಕರ ಚಹಾಗಳ ಬಗ್ಗೆ ನೀಡಿದ್ದೇವೆ, ಮುಂದೆ ಓದಿ.

ತುಳಸಿ ಚಹಾ

ಪ್ರತಿದಿನ ಯಾವುದಾದರೂ ಒಂದು ರೂಪದಲ್ಲಿ ತುಳಸಿಯ ಎಲೆಗಳನ್ನು ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಬಲವಾಗುತ್ತದೆ, ಜೊತೆಗೆ ಹಲವಾರು ಸಣ್ಣಪುಟ್ಟ ಸೊಂಕಿನ ಸಮಸ್ಯೆ ಕೂಡ ದೂರವಾಗುತ್ತದೆ, ಎನ್ನುವುದನ್ನು ವೈದ್ಯರ ಮಾತು. ಇದಕ್ಕೆ ಮುಖ್ಯ ಕಾರಣ ತುಳಸಿ ಎಲೆ ಗಳಲ್ಲಿ ಔಷಧೀಯ ಗುಣಗಳು ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಈ ತುಳಸಿ ಯಲ್ಲಿ ಆಂಟಿ ಇನ್ಫಾಮೇಟರಿ, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದ ರಿಂದ, ಮಳೆಗಾಲದಲ್ಲಿ ತುಳಸಿ ಎಲೆಗಳ ಚಹಾ ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ, ಬಹಳ ಒಳ್ಳೆಯದು.
ಇನ್ನು ತುಳಸಿ ಚಹಾ ತಯಾರಿಸುವುದು ಅಷ್ಟು ಕಷ್ಟಕರವಲ್ಲ, ಮನೆಯಲ್ಲಿ ಈ ಚಹಾವನ್ನು ಫಟಾ ಫಟ್ ಆಗಿ ರೆಡಿ ಮಾಡಿಕೊಳ್ಳಬಹುದು. ಒಂದು ಲೋಟ ಕುದಿಯುವ ನೀರಿಗೆ, ಸ್ವಲ್ಪ ತುಳಸಿ ಎಲೆ ಗಳನ್ನು ಹಾಕಿದರೆ, ಚಹಾ ರೆಡಿಯಾಗುತ್ತದೆ! ಬೇಕೆಂದರೆ ಇದಕ್ಕೆ, ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಬಹುದು.

vtv vitla

ಪುದೀನಾ ಎಲೆಗಳ ಚಹಾ

ಇಂದಿನ ದಿನಗಳಲ್ಲಿ ಗ್ರೀನ್ ಟೀ ಹಾಗೆಯೇ ಪುದೀನಾ ಟೀ, ಲೆಮನ್ ಟೀ, ಶುಂಠಿ ಚಹಾ, ಇವೆಲ್ಲವೂ ಕೂಡ ತುಂಬಾನೇ ಫೇಮಸ್ ಆಗುತ್ತಾ ಬರುತ್ತಿದೆ. ಅದರಲ್ಲೂ ಪುದೀನಾ ಚಹಾ ಅಂತೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಅಜೀರ್ಣತೆ, ಮಲಬದ್ಧತೆ, ಎದೆಯುರಿ ಸಮಸ್ಯೆಯನ್ನು ನಿವಾರಿಸುವಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ.
ಇದಕ್ಕೆ ಮುಖ್ಯ ಕಾರಣ, ಈ ಚಹಾ ರೆಡಿ ಮಾಡುವಾಗ ಬಳಸುವ ಪುದೀನಾ ಎಲೆಗಳಲ್ಲಿ ಆಂಟಿ ಇನ್ಫ್ಲೆ ಮೇಟರಿ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ, ದೇಹದ ಜೀರ್ಣಶಕ್ತಿಯ ಪ್ರಕ್ರಿಯೆಯನ್ನು, ಹೆಚ್ಚು ಮಾಡುವುದು ಮಾತ್ರವಲ್ಲದೆ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಕಂಡು ಬರುವ ಸಣ್ಣ-ಪುಟ್ಟ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಪುದೀನಾ ಟೀ ರೆಡಿ ಮಾಡುವ ವಿಧಾನ

ಒಂದು ಲೋಟ ನೀರನ್ನು ಕುದಿಯಲು ಬಿಟ್ಟು, ಇದಕ್ಕೆ ಸ್ವಲ್ಪ ಪುದೀನಾ ಎಲೆಗಳನ್ನು ಹಾಕಿ, ಐದು ನಿಮಿಷಗಳ ಕಾಲ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ. ಚಹಾದ ಬಣ್ಣ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಗ್ಯಾಸ್ ಒಲೆ ಆಫ್ ಮಾಡಿ.
ನಂತರ ಪಾತ್ರೆಯನ್ನು ಕೆಳಗಿಳಿಸಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು, ನಂತರ ಸೋಸಿ ಕೊಳ್ಳಿ. ಬೇಕಿದ್ದರೆ ರುಚಿಗಾಗಿ ಒಂದು ಟೀ ಚಮಚ ಜೇನು ತುಪ್ಪ ಅಥವಾ ಒಂದು ಟೀ ಚಮಚ ಆಗು ವಷ್ಟು ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ, ಬಿಸಿಬಿಸಿ ಇರುವಾಗಲೇ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ.

ಗ್ರೀನ್ ಟೀ

ಪ್ರತಿದಿನ ಕೆಫಿನ್ ಅಂಶ ಹೆಚ್ಚಿರುವ ಟೀ-ಕಾಫಿ ಕುಡಿಯುವ ಬದಲು ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್ಫಾಮೇಟರಿ ಅಂಶಗಳು ನಮ್ಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ, ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು, ಬಲಪಡಿಸು ವುದರ ಜೊತೆಗೆ ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ನೆರವಾಗುತ್ತದೆ.

ಚಾಮೋಮೈಲ್ ಚಹಾ

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಈ ಸಮಯದಲ್ಲಿ ದಿನಕ್ಕೊಮ್ಮೆ ಆದರೂ ಚಾಮೋಮೈಲ್ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ, ಈ ಸಮಯದಲ್ಲಿ ಕಂಡು ಬರುವ ಶೀತ, ಕೆಮ್ಮು, ಜ್ವರ ದಂತಹ ಸಮಸ್ಯೆಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.
ಇನ್ನೂ ಮುಖ್ಯವಾಗಿ ಈ ಚಾಮೋಮೈಲ್ ಚಹಾದ ಪ್ರಯೋಜನಗಳು ಏನೆಂದರ, ನಮ್ಮ ದೇಹ ದೊಳಗಿನ ಕಲ್ಮಶಗಳನ್ನು ಮೂತ್ರದ ಮೂಲಕ ಹೊರಹಾಕುವುದು ಮಾತ್ರವಲ್ಲದೆ, ಕಿಡ್ನಿಗಳಿಗೆ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ, ಜೊತೆಗೆ ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಣ ದಲ್ಲಿ ಇಡುತ್ತದೆ.

- Advertisement -

Related news

error: Content is protected !!