Wednesday, June 17, 2026
spot_imgspot_img
spot_imgspot_img

ಇಟ್ಟಿಗೆ ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿ ; ಇಟ್ಟಿಗೆಗಳ ಮಧ್ಯೆ ಸಿಲುಕಿಕೊಂಡ ಕಾರ್ಮಿಕ

- Advertisement -
- Advertisement -

ಹುಬ್ಬಳ್ಳಿ: ಇಟ್ಟಿಗೆ ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ನಡೆದಿದೆ. ಅದರ ಮೇಲಿದ್ದ ಕಾರ್ಮಿಕ ಚೆಲ್ಲಾಡಿದ ಇಟ್ಟಿಗೆಗಳ ನಡುವೆ ನರಳುತ್ತಿದ್ದ ದೃಶ್ಯ ಕಂಡುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಉರುಳಿದೆ. ಉರುಳಿದ ಪರಿಣಾಮವಾಗಿ ಐಟಿಸಿ ಗೋದಾಮಿನ ಎದುರು ರಸ್ತೆ ತುಂಬೆಲ್ಲಾ ಇಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗೆ ರಾಶಿಯಾಗಿ ಬಿದ್ದ ಇಟ್ಟಿಗೆಗಳ ರಾಶಿಯ ನಡುವೆ ಒಬ್ಬ ಕಾರ್ಮಿಕ ಸಿಲುಕಿ ನರಳಾಡುತ್ತಿರುವ ದೃಶ್ಯ ಕಂಡುಬಂದಿದೆ. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!