Tuesday, July 28, 2026
spot_imgspot_img
spot_imgspot_img

ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದು ನಗದು ಎಗರಿಸಿದ್ದ ಭೂಪ

- Advertisement -
- Advertisement -

ಉಡುಪಿ : ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮೀಪ ಇರುವ ನಮ್ಮ ಮೊಬೈಲ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಗದು ಕಳವುಗೈದು ಪರಾರಿಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಸುಮಂತ್ ಎಸ್ ಆಚಾರ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಜು.14 ರಂದು ಬೆಳಿಗ್ಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿ ಮೊಬೈಲ್ ಬೇಕು ಎಂದು ಕೇಳಿದ್ದು, ಆಗ ಸುಮಂತ್ ಅವರು ಮೊಬೈಲ್ ತೆಗೆದುಕೊಡುತ್ತಿರುವಾಗ ಆತ ಅಂಗಡಿಯ ಒಳಗೆ ಟೇಬಲ್ ನಲ್ಲಿ ಇಟ್ಟಿದ್ದ 500 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!