Sunday, August 23, 2026
spot_imgspot_img
spot_imgspot_img

ಉಡುಪಿ: ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ್‌ರಾಜ್ಯ ಕಳ್ಳರು ಪೊಲೀಸರ ಬಲೆಗೆ

- Advertisement -
- Advertisement -

ಉಡುಪಿ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ ಗೆ ತೆರಳಿ ಕಳ್ಳ ತನ ಮಾಡುತ್ತಿದ್ದ ನಾಲ್ವ ರು ಅಂತರ್‌ರಾಜ್ಯ ಕಳ್ಳ ರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಶನಾಬೆಲ್ಲಾ ಬಿ.(45), ಮೊಹಮ್ಮ ದ್ ಆಲಿ (32), ಅಶುರ್ ಆಲಿ (32) ಮತ್ತು ಗಣೇಶ್ ಕುಮಾರ್ ಬಂಧಿತರು. ಬಂಧಿತರಿಂದ ರೂ. 1,49,000 ಮೌಲ್ಯ ದ 28.882 ಗ್ರಾಂ ತೂಕದ ಚಿನ್ನ ದ ಗಟ್ಟಿ, ರೂ.1,17,000 ಮೌಲ್ಯ ದ 26 ಗ್ರಾಂ ಚಿನ್ನ ದ ಗಟ್ಟಿ ಮತ್ತು ಒಂದು ಮೋಟಾರ್ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲೆಯಾಳ ಮತ್ತು ತಮಿಳಿನಲ್ಲಿ ಮಾತನಾಡುತ್ತಿದ್ದ ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಆಭರಣದಂಗಡಿಗೆ ಬಂದು ಜೂನ್ 6 ರಂದು ಮಧ್ಯಾ ಹ್ನ 1.49 ಲ.ರೂ ಮೌಲ್ಯ ದ 28.79 ಗ್ರಾಂ . ಚಿನ್ನ ದ ನೆಕ್ಲೆ ಸ್ ಕಳವು ಮಾಡಿದ್ದ ರು. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!