Tuesday, June 23, 2026
spot_imgspot_img
spot_imgspot_img

ಉದ್ಯೋಗ ಕೊಡಿಸುವ ಆಮೀಷವೊಡ್ಡಿIFS ಅಧಿಕಾರಿಯಿಂದ ಯುವತಿಯ ಮೇಲೆ ಅತ್ಯಾಚಾರ..!

- Advertisement -
- Advertisement -
vtv vitla
vtv vitla
vtv vitla

ಬೆಂಗಳೂರು: ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ಆಮೀಷವೊಡ್ಡಿ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅರಣ್ಯ ಇಲಾಖೆ ಅಧಿಕಾರಿ ರವಿಶಂಕರ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಒಂದೂವರೆ ವರ್ಷದ ಬಳಿಕ ಈ ಕೇಸ್ ಬೆಳಕಿಗೆ ಬಂದಿದೆ. ದೂರು ಕೊಟ್ಟ ಯುವತಿ ಕೊಟ್ಟ ಸಾಕ್ಷ್ಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ.

vtv vitla

ಫೇಸ್‌ಬುಕ್ ಮೂಲಕ ಯುವತಿಗೆ ರವಿಶಂಕರ್ ಪರಿಚಯವಾಗುತ್ತದೆ. ಅರಣ್ಯ ಇಲಾಖೆ ಕ್ವಾಟ್ರರ್ಸ್‌ಗೆ ಯುವತಿಯನ್ನು ಕರೆಸಿಕೊಂಡು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ಮುಂದೆ ನಾವು ಗಂಡ ಹೆಂಡತಿ ಎಂದು ರವಿಶಂಕರ್ ಹೇಳಿದ್ದರಂತೆ.

ಈ ಬಗ್ಗೆ ಯುವತಿ ದೂರು ಕೊಟ್ಟಿದ್ದು, ರವಿಶಂಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಒಂದೂವರೆ ವರ್ಷದ ಬಳಿಕ ಪೊಲೀಸರು ಸ್ಥಳ ಮಹಜರ್ ಮಾಡಿದಾಗ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಇನ್ನೊಂದು ಕಡೆ ಯುವತಿಯ ಮೇಲೆ ಹನಿಟ್ರ್ಯಾಪ್ ಆರೋಪಗಳು ಕೇಳಿ ಬಂದಿದೆ.

vtv vitla
vtv vitla
vtv vitla
- Advertisement -

Related news

error: Content is protected !!