- Advertisement -
- Advertisement -
ಉಳ್ಳಾಲ: ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಹಾಗೂ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ಕೋಟೆಪುರದಲ್ಲಿ ನಡೆದಿದೆ.

ಕೋಟೆಪುರ ನಿವಾಸಿ ಶೌಕತ್ (35) ಬಂಧಿತ ಆರೋಪಿಯಾಗಿದ್ದಾನೆ. ಉಳಿದ ಆರೋಪಿಗಳು ಪರಾರಿಯಾಗಿದ್ದು ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ಎರಡು ಫುಲ್ ಲಾರಿ ಮತ್ತೆರಡು ಲಾರಿಗಳಲ್ಲಿ ಅರ್ಧದಷ್ಟು ಮರಳು ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಆರೋಪಿಗಳು ಮೂರು ಲೋಡು ಮರಳು ಶೇಖರಣೆ ಮಾಡಿಟ್ಟಿದ್ದು, ಮರಳು ಸಹಿತ ನಾಲ್ಕು ಲಾರಿ, ಎರಡು ದ್ವಿಚಕ್ರ ವಾಹನ ಸಹಿತ ವಶಪಡಿಸಿಕೊಂಡಿರುವ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ಪೊಲೀಸರ ತಂಡ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.


- Advertisement -








