Saturday, June 28, 2025
spot_imgspot_img
spot_imgspot_img

ಕಮರಿಗೆ ಉರುಳಿ ಬಿದ್ದ ಸೇನಾ ವಾಹನ; 16 ಮಂದಿ ಯೋಧರು ಹುತಾತ್ಮ

- Advertisement -
- Advertisement -
vtv vitla

ಸಿಕ್ಕಿಂ: ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನ ಜಾರಿ ಕದುರಿಗೆ ಬಿದ್ದಿದ್ದು ಇದರ ಪರಿಣಾಮ 16 ಮಂದಿ ಸೇನಾ ಯೋಧರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಸಿಕ್ಕಿಂನಲ್ಲಿ ಶುಕ್ರವಾರ ನಡೆದಿದೆ. ಬೆಳಿಗ್ಗೆ ಚಾಟಿನ್ ನಿಂದ ಥಾಂಗು ಕಡೆಗೆ ಪ್ರಯಾಣಿಸುತ್ತಿರುವ ವೇಳೆ ಝೀಮಾ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ.

ಉತ್ತರ ಸಿಕ್ಕಿಂ ನ ಝೀಮಾ ಮಾರ್ಗದಲ್ಲಿ ಸೇನಾ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಜರಿ ಕಮರಿಗೆ ಬಿದ್ದಿದೆ ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಗಾಯಗೊಂಡ ನಾಲ್ವರು ಸಹ ಯೋಧರನ್ನು ಏರ್ ಲಿಸ್ಟ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಅಪಘಾತದಲ್ಲಿ ಮೂವರು ಜಂಗಿಯ‌ ಕಮಿಷನ್ ಅಧಿಕಾರಿಗಳು ಹಾಗೂ 13 ಮಂದಿ ಸೇನಾ ಯೋಧರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತದೇಹಗಳನ್ನು ಕಮರಿಯಿಂದ ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Related news

error: Content is protected !!