Sunday, September 20, 2026
spot_imgspot_img
spot_imgspot_img

ಕಾರ್ಕಳ: ತಡರಾತ್ರಿ ಹೊತ್ತಿ ಉರಿದು ಭಸ್ಮವಾದ ಕಾರು

- Advertisement -
- Advertisement -

ಕಾರ್ಕಳ: ಬಜಗೋಳಿ- ಕಡಾರಿ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಕಾರೊಂದು ಉರಿದು ಭಸ್ಮಗೊಂಡಿದೆ.

ಸುರತ್ಕಲ್‍ಯಿಂದ ಶೃಂಗೇರಿಯ ಕಡೆಗೆ ಹೋಗುತ್ತಿದ್ದ ಮಾರುತಿ ಭ್ರೀಝ್ ಕಾರಿನ ಮುಂಭಾಗದಲ್ಲಿ ಕಾಣಿಸಿಕೊಂಡ ಹೊಗೆಯು ಜ್ವಾಲೆಯಾಗಿ ಪ್ರಜ್ವಲಿಸಿ ಇಡೀ ಕಾರನ್ನು ಆವರಿಸಿ ಸುಟ್ಟು ಕರಗಲಾಗಿದೆ. ರಾತ್ರಿ 11.15ರ ವೇಳೆಗೆ ಘಟನೆ ಸಂಭವಿಸಿದೆ. ಸುರತ್ಕಲ್‍ನ ಅಬ್ದುಲ್ ಖಾದರ್, ಖಾಲಂದರ್ ಶೆಫಿ ಎಂಬವರು ಕೆಎ 51 ಎಂ.ಕೆ.3960 ನಂಬ್ರದ ಮಾರುತಿ ಭ್ರೀಝ್ ಕಾರಿನಲ್ಲಿ ಶೃಂಗೇರಿ ಕಡೆಗೆ ಪ್ರಯಾಣಿಸುತ್ತಿದ್ದರು.

ಸ್ಥಳೀಯ ಮನೆಮಂದಿ ಪಂಪ್ ಮೂಲಕ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರು. ಬಳಿಕ ಕಾರ್ಕಳ ಅಗ್ನಿ ಶಾಮಕ ದಳದವರು ಘಟನಾ ಸ್ಥಳಕ್ಕೆ ದೌಡಾಯಿಸಿ ಪೂರ್ಣ ಪ್ರಮಾಣದಲ್ಲಿ ಬೆಂಕಿ ನಂದಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!