Tuesday, June 23, 2026
spot_imgspot_img
spot_imgspot_img

ಕುಡಿದ ಮತ್ತಿನಲ್ಲಿ ತನಗೆ ತಾನೇ ಇರಿದುಕೊಂಡ ಯುವಕ – ವಿಡಿಯೋ ವೈರಲ್

- Advertisement -
- Advertisement -

ಮಧ್ಯಪ್ರದೇಶ: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡುತ್ತಾ ತನಗೆ ತಾನೇ ಚಾಕು ಇರಿದುಕೊಂಡೊದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಹೋಳಿ ದಹನ ಕಾರ್ಯಕ್ರಮದಲ್ಲಿ ಯುವಕ ಪಾಲ್ಗೊಂಡಿದ್ದು, ಕುಣಿಯುತ್ತ ತನ್ನ ಎದೆಗೆ ತಾನೇ ಚಾಕು ಇರಿದುಕೊಂಡಿದ್ದಾನೆ. ಮದ್ಯದ ನಶೆಯಲ್ಲಿದ್ದಿದ್ದರಿಂದ ಕಂಟ್ರೋಲ್‌ ಸಿಗದೆ ಚಾಕು ಅವನ ಎದೆಗೆ ಹೊಕ್ಕಿದೆ.

ಇನ್ನು ಗೋಪಾಲ್‌( 38 ) ತನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ಎಂಜಾಯ್‌ ಮಾಡುತ್ತಿದ್ದು, ಜೇಬಿನಲ್ಲಿದ್ದ ಚಾಕು ತೆಗೆದು ಮೂರ್ನಾಲ್ಕು ಬಾರಿ ಇರಿದುಕೊಂಡಂತೆ ಆಕ್ಷನ್‌ ಮಾಡಿದ್ದು, ಚಾಕು ಆಳವಾಗಿ ಎದೆಗೆ ಚುಚ್ಚಿಕೊಂಡು ರಕ್ತ ಸುರಿಯಲಾರಂಭಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.

- Advertisement -

Related news

error: Content is protected !!