Thursday, September 24, 2026
spot_imgspot_img
spot_imgspot_img

ಕೋಟ: ತೆಂಗಿನ ಮರ ಬಿದ್ದು ವ್ಯಕ್ತಿ ಮೃತ್ಯು

- Advertisement -
- Advertisement -

ಕೋಟ: ಕಾವಡಿ ಗ್ರಾಮದ ಸಸಿಹಿತ್ಲು ಎಂಬಲ್ಲಿ ಜೆಸಿಬಿ ಮೂಲಕ ತೆರವುಗೊಳಿಸುವಾಗ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕಾವಡಿ ಗ್ರಾಮದ ಸಸಿಹಿತ್ಲು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ.

ಜೆಸಿಬಿ ಮೂಲಕ ಬೀಳುವ ಸ್ಥಿತಿಯಲ್ಲಿದ್ದ ತೆಂಗಿನ ಮರವನ್ನು ತೆರವುಗೊಳಿಸುತ್ತಿದ್ದಾಗ ಜೆಸಿಬಿ ಚಾಲಕ ಯಾವುದೇ ಸೂಚನೇ ನೀಡದೇ ಒಮ್ಮೇಲೆ ಮರವನ್ನು ದೂಡಿದ ಕಾರಣ, ಮರ ರಮೇಶ ಎಂಬವರ ಮೇಲೆ ಬಿತ್ತೆನ್ನಲಾಗಿದೆ.

ಇನ್ನು ಗಂಭೀರವಾಗಿ ಗಾಯಗೊಂಡ ರಮೇಶ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!