Tuesday, July 1, 2025
spot_imgspot_img
spot_imgspot_img

ಜಮ್ಮು ಕಾಶ್ಮೀರದಲ್ಲಿ 15 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಪೊಲೀಸರು

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಪೊಲೀಸರು 15 ಕೆಜಿ ಸುಧಾರಿತ ಸ್ಫೋಟಕ(ಐಇಡಿ) ಸಾಧನವನ್ನು ನಿಷ್ಕ್ರಿಯಗೊಳಿಸಿ ದೊಡ್ಡ ಅನಾಹುತು ತಪ್ಪಿಸಿದ್ದಾರೆ.

ಸಿಲಿಂಡರಾಕಾರದ ಐಇಡಿಯಲ್ಲಿ ಆರ್‌ಡಿಎಕ್ಸ್ ಇದ್ದು, ಘಟನೆ ಸಂಬಂಧ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಐಇಡಿ ಅಲ್ಲದೆ, ಬಸಂತ್‌ಗಢ ಪ್ರದೇಶದಲ್ಲಿ ಏಳು 7.62 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು ಐದು ಡಿಟೋನೇಟರ್‌ ಹಾಗೂ ಒಂದು ಕೋಡೆಡ್ ಶೀಟ್ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಲೆಟರ್‌ಪ್ಯಾಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸ್ಫೋಟಕ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿತ್ತು ಎಂದು ಶಂಕಿಸಲಾಗಿದೆ.

- Advertisement -

Related news

error: Content is protected !!