Wednesday, May 8, 2024
spot_imgspot_img
spot_imgspot_img

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಭಾಗ್ಯ

- Advertisement -G L Acharya panikkar
- Advertisement -

ತಿರುವನಂತಪುರ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಕಳೆದ ಕೆಲ ತಿಂಗಳುಗಳಿಂದ ಪೂಜೆ ಪುನಾಸ್ಕಾರಗಳು ಸ್ಥಗಿತಗೊಂಡಿದ್ದುವು.ದೇವಸ್ಥಾನದ ಬಾಗಿಲು ಈಗಾಗಲೇ ತೆರೆಯಲಾಗಿದ್ದು ಇದೀಗ ಮುಂದಿನ ಅಕ್ಟೋಬರ್ 16 ರಿಂದ 21 ರವರೆಗೆ ದೇಗುಲ ತೆರೆದಿರಲಿದೆ.

ಈಗಾಗಲೆ ತಿಂಗಳಲ್ಲಿ ಐದು ದಿನಗಳ ಕಾಲ ಪೂಜೆ ನೆರವೇರುತಿದ್ದು , ಅಕ್ಟೋಬರ್ ಮಲಯಾಳಂನ ತುಲಾಮ್ ತಿಂಗಳಲ್ಲಿ ಭಕ್ತರಿಗೆ ಪ್ರವೇಶಕ್ಕೆ ಕೇರಳ ಸರ್ಕಾರ ನಿರ್ದರಿಸಿದೆ.ಮಲಯಾಳಂ ಪಂಚಾಂಗದ ಪ್ರಕಾರ ತುಲಾಂ ತಿಂಗಳಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಕಾಲ ವಿಶೇಷ ಪೂಜೆ ಮಾಡುವ ಸಂಪ್ರದಾಯವಿದೆ. ಅದುದರಿಂದ ಭಕ್ತರಿಗೆ ಕೊರಾನ ನಿಯಮಗಳನ್ವಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಕೇರಳ ಸರಕಾರದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ತಿಂಗಳಿನಿಂದ ದೇಗುಲ ತೆರೆದಿರಲಿದ್ದು, ನಂತರ ಮಂಡಲ ಪೂಜೆಗೆ ದೇವಸ್ಥಾನ ತೆರೆಯಲಿದೆ ಎಂದು ಶಬರಿಮಲೆ ದೇಗುಲವನ್ನು ನಿರ್ವಹಣೆ ಮಾಡುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

- Advertisement -

Related news

error: Content is protected !!