- Advertisement -
- Advertisement -

ನವದೆಹಲಿ: ದೇಶದಲ್ಲೀಗ ಪ್ರತೀ ದಿನ 20 ಸಾವಿರ ಕೋಟಿ ರೂ.ಗಳ ನಗದುರಹಿತ ವಹಿವಾಟು ನಡೆಯುತ್ತಿದ್ದು, ಡಿಜಿಟಲ್ ವಹಿವಾಟಿನಿಂದ ಅನುಕೂಲದೊಂದಿಗೆ ಪ್ರಾಮಾಣಿಕತೆಯ ವಾತಾವರಣವೂ ನಿರ್ಮಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು 88ನೇ ಮನ್ ಕೀ ಬಾತ್ನಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಆನ್ಲೈನ್ ಪಾವತಿಯೂ ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದು, ಇದರಿಂದ ಹಲವಾರು ಹೊಸ ಫಿನ್ಟೆಕ್ ಸ್ಟಾರ್ಟ್ಅಪ್ಗಳು ಹುಟ್ಟಲಾರಂಭಿಸಿವೆ ಎಂದರು.

ಇನ್ನು ನೀವೆಲ್ಲರೂ ನಗದಿಲ್ಲದೇ ಹೊರಹೋಗಿ ನಿಮ್ಮ ಡಿಜಿಟಲ್ ಪಾವತಿಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಿ. ಅದು ದೇಶದ ಇತರರಿಗೂ ಸ್ಫೂರ್ತಿಯ ಮೂಲ ವಾಗಬಹುದು ಎಂದು ಸಲಹೆ ನೀಡಿದ್ದಾರೆ.

ಮೇ ತಿಂಗಳಲ್ಲಿ ಈದ್, ಅಕ್ಷಯ ತೃತೀಯ, ಬುದ್ಧ ಪೂರ್ಣಿಮೆ ಸೇರಿದಂತೆ ಹಲವು ಹಬ್ಬಗಳಿದ್ದು, ಎಲ್ಲರಿಗೂ ಹಬ್ಬದ ಶುಭಾಶಯಗಳು. ಆದರೆ ಇವುಗಳ ನಡುವೆಯೇ ಕೊರೊನಾ ಬಗ್ಗೆಯೂ ಜನ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದ್ದಾರೆ.


- Advertisement -








