Wednesday, June 24, 2026
spot_imgspot_img
spot_imgspot_img

ತನ್ನದೇ ಮಗುವಿಗೆ ಕ್ರೂರವಾಗಿ ಹಲ್ಲೆ ನಡೆಸುತ್ತಿದ್ದ ತಾಯಿ ಅಂದರ್!

- Advertisement -
- Advertisement -

ತಮಿಳುನಾಡು: ತಾಯಿಯೋರ್ವಳು ತನ್ನ ಮಗುವಿಗೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂಬಂಧ ಮಗುವಿನ ತಾಯಿಯ ವಿರುದ್ಧ ಆಕೆಯ ಪತಿಯೇ ದೂರು ನೀಡಿದ್ದರು.ಬಂಧಿತ ತಾಯಿಯನ್ನು ಆಂಧ್ರಪ್ರದೇಶದ ಚಿತ್ತೂರಿನ ನಿವಾಸಿ ತುಳಸಿ (22) ಎನ್ನಲಾಗಿದೆ.

ಐದು ವರ್ಷಗಳ ಹಿಂದೆ ತಮಿಳುನಾಡು ಮೂಲದ ವಡಿವಜಗನ್ ಎಂಬಾತನನ್ನು ಮದುವೆಯಾಗಿದ್ದ ತುಳಸಿ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ಹಾಗೂ ಒಂದೂವರೆ ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಪ್ರತಿ ದಿನ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು, ಪತಿಯು ಪತ್ನಿಯನ್ನು ಆಂಧ್ರಪ್ರದೇಶದಲ್ಲಿದ್ದ ಪತ್ನಿಯ ತವರು ಮನೆಗೆ ಆಕೆಯನ್ನು ಕರೆದೊಯ್ದು ಬಿಟ್ಟಿದ್ದ ಎನ್ನಲಾಗಿದೆ.

ತವರು ಮನೆ ಸೇರಿದ ಪತ್ನಿ ತನ್ನ ಪತಿಯ ಮೇಲಿನ ಸಿಟ್ಟಿನಿಂದ ತನ್ನ ಒಂದೂವರೆ ವರ್ಷ ವಯಸ್ಸಿನ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿ, ಮಗುವಿನ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾಳೆ. ಮುಷ್ಢಿ ಬಿಗಿದು ಮಗುವಿನ ಬಾಯಿಗೆ ಗುದ್ದಿದ್ದಾಳೆ. ಚಪ್ಪಲಿ ಎತ್ತಿಕೊಂಡು ಹೊಡೆಯುತ್ತಿದ್ದು, ಅಲ್ಲದೇ ಈ ಎಲ್ಲಾ ಕೃತ್ಯವನ್ನು ಆಕೆಯೇ ಸ್ವತಃ ವಿಡಿಯೋ ಮಾಡಿಕೊಂಡಿದ್ದಳು. ಈ ವಿಡಿಯೋವನ್ನು ಆಕೆಯ ಸಂಬಂಧಿಕರೊಬ್ಬರು ನೋಡಿ, ಪತಿಯ ಗಮನಕ್ಕೆ ತಂದಿದ್ದು, ಈ ವಿಡಿಯೋದ ಆಧಾರದಲ್ಲಿ ತಮಿಳುನಾಡು ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!