Saturday, August 29, 2026
spot_imgspot_img
spot_imgspot_img

ದಂತ ವೈದ್ಯರ ಯಡವಟ್ಟು; ಮುಖದ ಅಂದವನ್ನೇ ಕಳೆದುಕೊಂಡ ಸ್ಯಾಂಡಲ್ ವುಡ್ ನಟಿ..!

- Advertisement -
- Advertisement -

ಬೆಂಗಳೂರು: ಕೆಲವು ದಿನಗಳ ಹಿಂದೆ ದೇಹದ ತೂಕ ಇಳಿಸಿಕೊಳ್ಳಲು ಹೋದ ಕಿರುತೆರೆ ನಟಿ ದುರಂತ ಅಂತ್ಯ ಕಂಡಿದ್ದಳು. ಇದೀಗ ಮತ್ತೊಬ್ಬ ನಟಿಯ ಸರದಿ. ತನ್ನದಲ್ಲದ ತಪ್ಪಿಗೆ ಈ ನಟಿ ಮುಖದ ಅಂದವನ್ನೇ ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ನಟಿ ಸ್ವಾತಿ ಹಲ್ಲು ನೋವಿನ ಚಿಕಿತ್ಸೆಗಾಗಿ ಜೆಪಿ ನಗರದಲ್ಲಿರುವ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ನಟಿ ಸ್ವಾತಿಯನ್ನು ಪರೀಕ್ಷೆ ಮಾಡಿದಂತ ವೈದ್ಯರು, ರೂಟ್ ಕೆನಾಲ್ ಮಾಡಬೇಕಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ದಂತ ವೈದ್ಯರ ಸೂಚನೆಯಂತೆ ರೂಟ್ ಕ್ಯಾನಲ್ ಗಾಗಿ ನಟಿ ಸ್ವಾತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಹಲ್ಲಿನ ಸಮಸ್ಯೆಗೆ ರೂಟ್ ಕೆನಾಲ್ ಮಾಡಿದ್ದಾರೆ. ಊತ ಇರುತ್ತದೆ. ಎರಡು ಮೂರು ದಿನಗಳಲ್ಲಿ ಕಡಿಮೆ ಆಗಲಿದೆ ಎಂಬುದಾಗಿ ಹೇಳಿ ಕಳುಹಿಸಿದ್ದಾರೆ. ಆದ್ರೇ ಮುಖದ ಊತ ಮಾತ್ರ 20 ದಿನ ಕಳೆದ್ರು ಕಡಿಮೆ ಆಗಿಲ್ಲ.

ಈ ಬಗ್ಗೆ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ರೆ, ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ಕೊನೆಗೆ ನೋಡಿ ಈ ದಂತ ವೈದ್ಯರು ಮಾಡಿದಂತ ಯಡವಟ್ಟಿನಿಂದಾಗಿ ನನ್ನ ಮುಖದ ಪರಿಸ್ಥಿತಿ ಹೇಗೆ ಆಗಿದೆ. ಇಂತಹ ವೈದ್ಯರ ಬಳಿ ಹೋಗಬೇಡಿ ಎಂಬುದಾಗಿ ಜನರಲ್ಲಿ ಮನವಿಯನ್ನು ನಟಿ ಸ್ವಾತಿ ಮಾಡಿದ್ದಾರೆ. ಈಗ ಬೇರೊಬ್ಬ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!