Saturday, July 5, 2025
spot_imgspot_img
spot_imgspot_img

ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಎಳ್ಳು ಬಳಸುವುದರಿಂದಾಗುವ ಪ್ರಯೋಜನಗಳೇನು; ಇಲ್ಲಿದೆ ಮಾಹಿತಿ

- Advertisement -
- Advertisement -

ನಿಮ್ಮ ದಿನ ನಿತ್ಯದ ಆಹಾರವು ಸರಿಯಾಗಿದ್ದಾಗ, ಯಾವುದೇ ಚಿಕಿತ್ಸೆ, ಔಷಧವು ಅಗತ್ಯವಿಲ್ಲ. ಆದ್ದರಿಂದ ನಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳುವುದೇ ಜಾಣತನ ಔಷಧಿಯಾಗಿದೆ.

ಎಳ್ಳು ಅತ್ಯಂತ ಉಪಯುಕ್ತವಾದ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ನಿಮ್ಮ ದೇಹಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಉಪಯುಕ್ತವಾಗಿದೆ. ಇದರ ಜೊತೆಗೆ ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ಎಳ್ಳುವಿಗೆ ಅದ್ದರದ್ದೇ ಆದ ಪ್ರಮುಖ ಸ್ಥಾನವಿದೆ.

ಮಕ್ಕಳಿಗೆ ಮಸಾಜ್ ಮಾಡಲು ಎಳ್ಳಿನ ಎಣ್ಣೆಯು ಅತ್ಯಂತ ಸೂಕ್ತವಾಗಿದೆ. ಇದು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುವುದರಿಂದ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಎಳ್ಳು ಬೀಜಗಳನ್ನು ದಿನ ನಿತ್ಯ ಸೇವಿಸುವುದ್ದರಿಂದ ನಿಮ್ಮ ಹಲ್ಲುಗಳಿಗೆ ಉತ್ತಮ ಆರೋಗ್ಯ ನೀಡುತ್ತದೆ. ಹಲ್ಲನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ.

ನಿಮ್ಮ ದಿನ ನಿತ್ಯದ ಆಹಾರದಲ್ಲಿ ಎಳ್ಳು ಬೀಜಗಳನ್ನು ಸೇರಿಸುವುದ್ದರಿಂದ ನಿಮ್ಮ ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಎಳ್ಳು ಬೀಜಗಳನ್ನು ಸೇವಿಸಲು ನೀಡಿ.

ಇದು ವಿಟಮಿನ್ ಇ ಅನ್ನು ಹೊಂದಿದ್ದು, ನಿಮ್ಮ ದೇಹದ ಚರ್ಮಕ್ಕೆ ಮಾಯಿಶ್ಚರೈಸರನ್ನು ನೀಡುತ್ತದೆ. ಎಳ್ಳಿನ ಎಣ್ಣೆಯು ಕೂದಲಿಗೆ ಒಳ್ಳೆಯದು ಮತ್ತು ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ.

- Advertisement -

Related news

error: Content is protected !!