Friday, August 28, 2026
spot_imgspot_img
spot_imgspot_img

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಖೈದಿ ಸಾವು; ಸಹ ಖೈದಿಗಳಿಂದ ಪ್ರತಿಭಟನೆ

- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಯೋರ್ವ ಮೃತಪಟ್ಟಿದ್ದು, ಸಹಕೈದಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮೂಲದ ಆನಂದ್ (45) ಎಂಬ ಕೈದಿ ಹೃದಯಾಘಾತದಿಂದ ಬೆಳಿಗ್ಗೆ ಮೃತಪಟ್ಟಿದ್ದು, ಜೈಲಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟಿಲ್ಲ ಎಂದು ಸಹಕೈದಿಗಳು ಆರೋಪಿಸಿದ್ದಾರೆ.

ಜೈಲಿನ ಆವರಣದಲ್ಲಿ ಸೇರಿದ ಇತರ ಕೈದಿಗಳು, ಪ್ರತಿಭಟಿಸಿ ಸ್ಥಳಕ್ಕೆ ಜೈಲಿನ ಹಿರಿಯ ಅಧಿಕಾರಿಗಳನ್ನು ಕರೆಸಿ ದೂರು ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಇಬ್ಬರು ಕೈದಿಗಳು ಇಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗದೆ ಮೃತಟ್ಟಿದ್ದಾರೆ. ಇದರಿಂದಾಗಿ ಇತರೆ ಕೈದಿಗಳಿಗೆ ಆತಂಕ ಶುರುವಾಗಿದ್ದು, ಜೈಲಿನ ವೈದ್ಯಕೀಯ ವ್ಯವಸ್ಥೆಯನ್ನು ಕೂಡಲೇ ಸುಧಾರಿಸಬೇಕು. ಸದ್ಯ ಇರುವ ಜೈಲಿನ ಅಧಿಕಾರಿಗಳು ಹಾಗೂ ವೈದ್ಯರನ್ನು ಅಮಾನತು ಮಾಡಿ, ಹೊಸಬರನ್ನು ನೇಮಿಸಬೇಕು ಎಂದು ಜೈಲು ಅಧಿಕಾರಿಗಳು ಆಗ್ರಹಿಸಿದ್ದಾರೆ.

driving
- Advertisement -

Related news

error: Content is protected !!