Thursday, October 1, 2026
spot_imgspot_img
spot_imgspot_img

ಪುತ್ತೂರು: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ; ಅನ್ಯಕೋಮಿನ ತಂಡದಿಂದ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ..!

- Advertisement -
- Advertisement -

ಪುತ್ತೂರು: ವಾಹನಗಳ ನಡುವೆ ಡಿಕ್ಕಿ ಹೊಡೆದ ಕಾರಣ ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಅ.31 ರಂದು ನಗರದಲ್ಲಿ ನಡೆದಿದೆ.

ಅ.31 ರಂದು ಆಟೋ ರಿಕ್ಷಾ ಮತ್ತು ಆಕ್ಟಿವಾ ದ ನಡುವೆ ಡಿಕ್ಕಿ ಸಂಭಸಿದ್ದು, ಈ ಸಂದರ್ಭದಲ್ಲಿ ತಕರಾರು ತೆಗೆದ ಅನ್ಯಕೋಮಿನ ತಂಡ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆಗೊಳಗಾಗಿ ದಾಖಲಾದವರನ್ನು ಮುರ ನಿವಾಸಿ ಕರುಣಾಕರ ಎಂದು ಗುರುತಿಸಲಾಗಿದೆ. ಕರುಣಾಕರ ರವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,ಈ ಬಗ್ಗೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

- Advertisement -

Related news

error: Content is protected !!