Monday, September 7, 2026
spot_imgspot_img
spot_imgspot_img

ಪುತ್ತೂರು: ಈಶ್ವರಮಂಗಲದ ವ್ಯಕ್ತಿ ವಿಜಯಪುರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಪುತ್ತೂರು: ಈಶ್ವರಮಂಗಲದ ಪಡುವನ್ನೂರು ಗ್ರಾಮದ ಸಾರಕೂಟೇಲು ನಿವಾಸಿಯಾದ ಪ್ರದೀಪ್ ವಿಜಯಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಜಯಪುರದ ವಸತಿ ಗೃಹವೊಂದರಲ್ಲಿ ಪ್ರದೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ನಿವೃತ್ತಿ ಇಂಜಿನಿಯರ್ ಮುತ್ತಪ್ಪ ಗೌಡ ಅವರ ಹಿರಿಯ ಪುತ್ರರಾಗಿರುವ ಪ್ರದೀಪ್ ಗೌಡ ಬೆಂಗಳೂರಿನಲ್ಲಿ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ಪ್ರದೀಪ್ ಗೌಡ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ದೂರು ಕೂಡ ದಾಖಲಿಸಿದ್ದರು. ಆದರೆ ಪ್ರದೀಪ್ ವಿಜಯಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರದೀಪ್ ಗೌಡ ತಂದೆ, ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

vtv vitla
- Advertisement -

Related news

error: Content is protected !!