Monday, July 27, 2026
spot_imgspot_img
spot_imgspot_img

ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಐ.ಬಿ ಸಂದೀಪ್ ಕುಮಾರ್, ಕಾರ್ಯದರ್ಶಿಯಾಗಿ ಅಜಿತ್ ಕುಮಾರ್

- Advertisement -
- Advertisement -

ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆ ಪುತ್ತೂರು ಪತ್ರಿಕಾಭವನದಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಆಗ್ರಹದ ಮೇರೆಗೆ ಹಿರಿಯ ಸದಸ್ಯ ಐ.ಬಿ. ಸಂದೀಪ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಹಲವು ಸಮಯಗಳಿಂದ ಅತಂತ್ರವಾಗಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಸದಸ್ಯರ ಸಭೆಯಲ್ಲಿ ನಡೆಸುವಂತೆ ಸದಸ್ಯರು ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಐ.ಬಿ.ಸಂದೀಪ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕದ ಕುಮಾರ್ ಕಲ್ಲಾರೆ, ಕಾರ್ಯದರ್ಶಿಯಾಗಿ ನ್ಯೂಸ್ ೧೮ ಕನ್ನಡ ವರದಿಗಾರ ಅಜಿತ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ರಾಜೇಶ್ ಪಟ್ಟೆ, ಖಜಾಂಚಿಯಾಗಿ ದೈಜಿ ವರ್ಲ್ಡ್ ಚಾನಲ್ ವರದಿಗಾರ ಕೃಷ್ಣಪ್ರಸಾದ್ ಬಲ್ನಾಡು ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿಗಳಾದ ನರಸಿಂಹ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ಪತ್ರಿಕಾ ಕಛೇರಿಯ ಮೆನೇಜರ್ ಆಗಿ ವಿ.ಫೋರ್ ವರದಿಗಾರ ಪ್ರವೀಣ್ ಕುಮಾರ್ ಬೊಳುವಾರು ಅವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು.

vtv vitla
- Advertisement -

Related news

error: Content is protected !!