- Advertisement -
![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
- Advertisement -
![](https://vtvvitla.com/wp-content/uploads/2020/09/ad-2-1-1024x513.jpg)
![](https://vtvvitla.com/wp-content/uploads/2021/09/WhatsApp-Image-2021-09-01-at-5.38.26-PM-819x1024.jpeg)
ಪುತ್ತೂರು: ಮೈಸೂರಿನಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಪುತ್ತೂರಿನ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
![](https://vtvvitla.com/wp-content/uploads/2021/05/yashpal-1024x299.jpg)
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಹಿಂದೂ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದ ಈ ಕೃತ್ಯ ನಡೆಯಬಾರದಿತ್ತು, ಈ ಘಟನೆಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು, ಸರಕಾರದ ಗಮನಕ್ಕೆ ಬಾರದೆ ದೇವಸ್ಥಾನ ಕೆಡವಲಾಗಿದೆ ಎನ್ನುವ ಸಮಜಾಯಿಷಿ ಒಪ್ಪಲು ಸಾಧ್ಯವಿಲ್ಲ.
ಸರಕಾರದ ಈ ಕೃತ್ಯದ ಬಗ್ಗೆ ಕ್ಷಮೆಯಾಚಿಸದೆ ಇದ್ದಲ್ಲಿ ಚುನಾವಣೆಯಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಈ ಕೃತ್ಯವನ್ನು ಕಾಂಗ್ರೇಸ್ ಅಥವಾ ಬೇರೆ ಯಾವುದೇ ಪಕ್ಷ ಮಾಡಿದ್ದರೆ ಒಪ್ಪಬಹುದಿತ್ತು. ಆದರೆ ಬಿಜೆಪಿಯ ಈ ನಡೆಗೆ ಕ್ಷಮೆಯಿಲ್ಲ ಎಂದರು.
![](https://vtvvitla.com/wp-content/uploads/2021/04/janapriya-ad-1-1024x597.jpg)
- Advertisement -