Friday, June 5, 2026
spot_imgspot_img
spot_imgspot_img

ಪುತ್ತೂರು: ರಿಕ್ಷಾ ಮತ್ತು ಜೀಪು ನಡುವೆ ಭೀಕರ ಅಪಘಾತ; ಮೂವರು ಗಂಭೀರ

- Advertisement -
- Advertisement -

ಪುತ್ತೂರು: ರಿಕ್ಷಾ ಮತ್ತು ಜೀಪು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ನೆಟ್ಟಾಲದಲ್ಲಿ ಜ.29ರಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೆಯ್ಯೂರು ನೆಟ್ಟಾಲದಿಂದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದೆ. ಜೀಪು ಚಾಲಕ ಕಣಿಯಾರು ಚಂದ್ರಶೇಖರ ಪೂಜಾರಿ ಜೀಪು ಚಲಾಯಿಸುತ್ತಿದ್ದು, ರಿಕ್ಷಾ ಚಾಲಕ ಎತ್ಯಡ್ಕ ಗಿರಿಧರ ಹಾಗೂ ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ರಿಕ್ಷಾದಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!