Tuesday, June 16, 2026
spot_imgspot_img
spot_imgspot_img

ಪೊಲೀಸರನ್ನೇ ಯಾಮಾರಿಸಿ ವಿದೇಶಕ್ಕೆ ಹಾರಿದ ‘ಅಲ್ಲಾ ಹು ಅಕ್ಬರ್’ ಘೋಷಣೆ ಹಾಕಿದ್ದ ಮುಸ್ಕಾನ್.!!

- Advertisement -
- Advertisement -

ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ವರ್ಸಸ್ ಹಿಜಾಬ್ ಸಂಘರ್ಷದ ಸಂದರ್ಭದಲ್ಲಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ, ವಿದ್ಯಾರ್ಥಿನಿ ಮುಸ್ಕಾನ್ ಗಮನ ಸೆಳೆಯಿದ್ದರು. ಇದೀಗ ಈಕೆ ಹಾಗೂ ಕುಟುಂಬಸ್ಥರು ಪೊಲೀಸರಿಗೂ ಮಾಹಿತಿ ನೀಡದೇ ವಿದೇಶಕ್ಕೆ ತೆರಳಿರೋದಾಗಿ ತಿಳಿದು ಬಂದಿದೆ.

BIG NEWS: ಪೊಲೀಸರನ್ನೇ ಯಾಮಾರಿಸಿ ವಿದೇಶಕ್ಕೆ ಹಾರಿದ 'ಅಲ್ಲಾ ಹು ಅಕ್ಬರ್' ಕೂಗಿದ  ವಿದ್ಯಾರ್ಥಿನಿ.!? - Kannada News, Kannada Breaking News, ಕನ್ನಡ, ಕನ್ನಡ ಸುದ್ದಿ,  ಕರ್ನಾಟಕ ವಾರ್ತೆ ...

ಕಾಲೇಜು ಕ್ಯಾಂಪಸ್ ನಲ್ಲಿ ಅಲ್ಲಾ ಹು ಅಕ್ಬರ್ ಕೂಗಿದ್ದಂತ ಮುಸ್ಕಾನ್ ಬಗ್ಗೆ ಆಲ್ ಖೈದಾ ಮೆಚ್ಚುಗೆ ವ್ಯಕ್ತ ಪಡಿಸಿತ್ತು. ಹಲವು ಮುಸ್ಲೀಂ ಮುಖಂಡರು ಅವರ ಮನೆಗೆ ಭೇಟಿ ನೀಡಿ ಗಿಫ್ಟ್, ಹಣವನ್ನು ನೀಡಿದ್ದರು. ಈ ಬೆನ್ನಲ್ಲೇ ವಿದೇಶಕ್ಕೆ ಹಾರಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಏಪ್ರಿಲ್ 25ರಂದೇ ಮುಸ್ಕಾನ್ ಕುಟುಂಬ ಸೌದಿಗೆ ತೆರಳಿದ್ದಾರೆ ಎನ್ನಲಾಗಿದೆ. ಖಾಕಿ ಕಣ್ ತಪ್ಪಿಸಿ, ಯಾವುದೇ ಮಾಹಿತಿ ಕೂಡ ನೀಡದೇ ಸೌದಿ ಪ್ರವಾಸ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಇದೊಂದು ಧಾರ್ಮಿಕ ಪ್ರವಾಸ ಎಂಬುದಾಗಿ ಮುಸ್ಕಾನ್ ಕುಟುಂಬದ ಆಪ್ತರ ಮಾಹಿತಿ. ಈ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವಂತ ಹಲವರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!