Sunday, August 30, 2026
spot_imgspot_img
spot_imgspot_img

ಸಾಮಾಜಿಕ ಜಾಲತಾಣಾದಲ್ಲಿ ವಿವಾದಿತ ಪೋಸ್ಟ್, ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಪೊಲೀಸ್ ಠಾಣಾ ಎದುರೇ ಕಲ್ಲು ತೂರಾಟ

- Advertisement -
- Advertisement -

ಹುಬ್ಬಳ್ಳಿ: ನಗರದಲ್ಲಿ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಜೀಪನ್ನು ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಸೀದಿ ಮೇಲೆ ಭಗವಾಧ್ವಜ ಹಾರಿಸಿದಂಥ ವಿಡಿಯೋ ಸ್ಟೇಟಸ್​​ಗೆ ಹಾಕಿಕೊಂಡಿದ್ದರಿಂದ ಇಂಥದ್ದೊಂದು ಗಲಾಟೆಗೆ ಮೂಲ ಕಾರಣವಾಗಿದೆ. ಆನಂದ ನಗರ ಘೋಡಕೆ‌ ಫ್ಲ್ಯಾಟ್​ ನಿವಾಸಿಯೊಬ್ಬ ಹೀಗೊಂದು ಎಡಿಟೆಡ್ ವಿಡಿಯೋ ಸ್ಟೇಟಸ್​ಗೆ ಹಾಕಿಕೊಂಡಿದ್ದ. ಈ ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

ಯುವಕನನ್ನು ವಶಕ್ಕೆ ಪಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಠಾಣೆ ಬಳಿ ಜಮಾಯಿಸಿದ್ದಾರೆ. ಈ ವೇಳೆ ಠಾಣೆ ಬಳಿ ಜಮಾಯಿಸಿದ ಒಂದು ಸಮುದಾಯದ ಜನರು ಕಲ್ಲುತೂರಾಟ ನಡೆಸಿದ್ದು, ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ. ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು, ಅಶ್ರವಾಯು ಸಿಡಿಸುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

Related news

error: Content is protected !!