Sunday, June 21, 2026
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; SDPI ಮುಖಂಡ ರಿಯಾಜ್ ಫರಂಗಿ ಪೇಟೆ ಮನೆಗೆ NIA ದಾಳಿ

- Advertisement -
- Advertisement -
astr

ದಕ್ಷಿಣ ಕನ್ನಡದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಾ ಬಂದಿರುವ ರಿಯಾಝ್ ಫರಂಗಿಪೇಟೆ ಮನೆ ಮೇಲೆ ಮುಂಜಾನೆ ಕೋಳಿ ಎದ್ದು ಕೂಗು ಹಾಕುವ ಮುನ್ನವೇ NIA ಶಾಕ್ ನೀಡಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುನ ಎನ್ಎಐ ಅಧಿಕಾರಿಗಳು ಇಂದು ಎಸ್ ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ. ದ.ಕ ಜಿಲ್ಲೆಯಲ್ಲಿ NIA ದಾಳಿ ಮುಂದುವರಿದಿದ್ದು SDPI ನಾಯಕ ರಿಯಾಝ್ ಫರಂಗಿಪೇಟೆ ದಾಳಿ ಮಾಡಿದೆ.


ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ಳಂ ಬೆಳಗ್ಗೆ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿದ ಸುದ್ದಿ ತಿಳಿದು ಮನೆಯ ಎದುರು ಎಸ್.ಡಿ.ಪಿ.ಐ. ಪಕ್ಷದ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

Related news

error: Content is protected !!