


ಆತನಿಗೆ ಮದುವೆಯಾಗಿ ಮಗ ಇದ್ದ. ಆದರೆ ಆತನಿಗೆ ಮತ್ತೊಂದು ಸಂಬಂಧ ಇತ್ತು. ಈ ವಿಷಯ ತಿಳಿದಿದ್ದ ಪತ್ನಿ ಮತ್ತು ಗಂಡನ ಪ್ರೇಯಸಿ ನಡುವೆ ಆಗಾಗ ಜಗಳ ಏರ್ಪಡುತ್ತಿತ್ತು. ಇದರಿಂದ ರೊಚ್ಚಿಗೆದ್ದ ಪ್ರಿಯತಮೆ ಆ್ಯಸಿಡ್ ಎರಚಿದ ಘಟನೆ ನಡೆದಿದೆ.
ಪ್ರಿಯಕರನ ಪತ್ನಿ ಹಾಗೂ ಎರಡೂವರೆ ವರ್ಷದ ಮಗುವಿನ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸಂತ್ರಸ್ಥೆ ಪತ್ನಿ ಹಾಗೂ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಇಬ್ಬರು ಮುಖದ ಮೇಲೆ ಆದ ಸುಟ್ಟಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಯಶೋಧರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯತಮೆ ಜಿಯಾ
25 ವರ್ಷದ ಮಹಿಳೆ ಜಿಯಾ ಸಂತ್ರಸ್ತೆಯ ಪತಿಯ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಆಗಾಗ ಈ ಬಗ್ಗೆ ಮಹಿಳೆ ಹಾಗೂ ಸಂತ್ರಸ್ತೆಯ ಮಧ್ಯೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯು ತನ್ನ ಸ್ನೇಹಿತರೊಂದಿಗೆ ಸೇರಿ ಸಂತ್ರಸ್ತೆಗೆ ಆ್ಯಸಿಡ್ ಹಾಕಲು ಪ್ಲ್ಯಾನ್ ಮಾಡಿದ್ದಾಳೆ. ಆ ಪ್ರಕಾರವಾಗಿಯೇ ತನ್ನ ಸ್ನೇಹಿತರನ್ನು ಸಂತ್ರಸ್ತೆಯ ಮನೆಗೆ ಕರೆದೊಯ್ದು ಆಕೆಯ ಮೇಲೆ ಹಾಗೂ ಸಂತ್ರೆಸ್ತೆಯ ಮಗನ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಳು.









