Tuesday, August 4, 2026
spot_imgspot_img
spot_imgspot_img

ಬಂಟ್ವಾಳ: ಮನೆಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನ; ಆರೋಪಿ ವಿರುದ್ಧ ದೂರು ದಾಖಲು..!

- Advertisement -
- Advertisement -
vtv vitla
vtv vitla
vtv vitla
vtv vitla

ಬಂಟ್ವಾಳ: ಮನೆಗೆ ನುಗ್ಗಿ ಯುವತಿಯೋರ್ವಳ ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಮಂಚಿ ನಿವಾಸಿ ಅಬ್ದುಲ್ ರಹಮಾನ್ ಎನ್ನಲಾಗಿದೆ.

ಇರಾ ನಿವಾಸಿಯಾದ ಯುವತಿಗೆ ಕಳೆದು ಒಂದು ವರ್ಷಗಳ ಹಿಂದೆ ಪರಿಚಯವಾದ ಅಬ್ದುಲ್ ರಹಮಾನ್ ಪದೇ ಪದೇ ಪೋನ್ ಮಾಡುತ್ತಿದ್ದ. ಅಲ್ಲದೇ ಫೋನ್ ಮೂಲಕ ಅಸಹ್ಯವಾಗಿ ಮಾತನಾಡುತ್ತಿದ್ದು, ಕರೆ ಸ್ವೀಕರಿಸದೆ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ, ಜೊತೆಗೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ.

ಜನವರಿ 25 ರಂದು ಯುವತಿಯ ಮನೆಗೆ ಬಂದ ಆರೋಪಿ ಅಬ್ದುಲ್ ರೆಹಮಾನ್ ಮಾನಭಂಗಕ್ಕೆ ಯತ್ನ ನಡೆಸಿದಾಗ ಆತನ ಕೈಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರೆಗೆ ಓಡಿ ಹೋಗಿರುವುದಾಗಿ ಸಂತ್ರಸ್ತೆ ಯುವತಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!