- Advertisement -
- Advertisement -



ಬಂಟ್ವಾಳ: ವಕೀಲರ ಕಛೇರಿಯಲ್ಲಿ ಕಳ್ಳತನ ನಡೆದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಿಸಿರೋಡು ಸಿ.ಟಿ.ಯಲ್ಲಿ ನಡೆದಿದೆ. ಬಿಸಿರೋಡ್ ನ ಶ್ರೀನಿವಾಸ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿರುವ ಎಂ ಸುದರ್ಶನ್ ಕುಮಾರ್ ಎಂಬವರ ಕಚೇರಿಗೆ ಗುರುವಾರ ತಡ ರಾತ್ರಿ ಕಳ್ಳರು ನುಗ್ಗಿ ನಗದು ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ವಕೀಲರು 26 ರಂದು ಬೆಳಿಗ್ಗೆ 8.45 ಗಂಟೆಗೆ ಕಛೇರಿಗೆ ಬಂದಾಗ ಯಾರೋ ಕಳ್ಳರು ಕಛೇರಿಯ ಒಂದು ಭಾಗದ ಶಟರಿನ ಬೀಗವನ್ನು ತುಂಡರಿಸಿ ನಂತರ ಕಛೇರಿಯಲ್ಲಿ ಇರುವ ಪ್ಯಾಬ್ರಿಕೇಷನ್ ನನ್ನು ತುಂಡರಿಸಿ ಕಛೇರಿಯ ಒಳಗೆ ನುಗ್ಗಿ ಡ್ರವರ್ ನಲ್ಲಿ ಇದ್ದ ಅಂದಾಜು ರೂ.3000/- ಹಣವನ್ನು ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



- Advertisement -








