Monday, June 22, 2026
spot_imgspot_img
spot_imgspot_img

ಬಂಟ್ವಾಳ: ಸಿಮೆಂಟ್ ಮಿಶ್ರಣ ಲಾರಿ ರಸ್ತೆಯಿಂದ ಮನೆಯಂಗಳಕ್ಕೆ ಪಲ್ಟಿ

- Advertisement -
- Advertisement -

ಬಂಟ್ವಾಳ: ಸಿಮೆಂಟ್ ಮಿಶ್ರಣ ಮಾಡುವ ಲಾರಿಯೊಂದು ರಸ್ತೆಯಿಂದ ಮನೆಯಂಗಳಕ್ಕೆ ಬಿದ್ದ ಘಟನೆ ಡಿ.9 ರಂದು ಮಧ್ಯ ರಾತ್ರಿ ವೇಳೆ ಬಂಟ್ವಾಳದ ಕುಮ್ಡೆಲು ಎಂಬಲ್ಲಿ ನಡೆದಿದೆ.

ಘಟನೆಯಿಂದ ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಕುಮ್ಡೆಲು ಎಂಬಲ್ಲಿ ಎದುರಿನಿಂದ ಬಂದ ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆಯ ಬದಿಗೆ ಸರಿದ ಲಾರಿ ನಿಯಂತ್ರಣ ಕಳೆದುಕೊಂಡು ಮನೆಯಂಗಳಕ್ಕೆ ಉರುಳಿ ಬಿದ್ದಿದೆ. ಘಟನೆಯಿಂದ ಮನೆಯವರ ಕಂಪೌಂಡ್ ಜರಿದು ಬಿದ್ದಿದ್ದು ನಷ್ಟ ಉಂಟಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

- Advertisement -

Related news

error: Content is protected !!