ನಾನು ಶಿವಣ್ಣ, ಪುನಿತ್ ಅಣ್ಣನ ಅಭಿಮಾನಿ, ವಿಶ್ ಯೂ ಹ್ಯಾಪಿ ಬರ್ತ್ಡೇ ಅಣ್ಣನ ಬರ್ತ್ ಡೇ, ಅಕ್ಕನ ಬರ್ತ್ ಡೇ ಎಂದು ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್.
ಅವರ ಬಳಿ ಬರ್ತ್ ಡೇ ವೀಶ್ ಮಾಡಿಸಿಕೊಳ್ಳಬೇಕು ಎಂಬ ಆಸೆ ಬಹಳಷ್ಟು ಜನರಿಗೆ ಇದೆ. ಸದ್ಯ ರಾಜ್ಯದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡಿಂಗ್ ಹೆಸರು ಎಂದರೆ ಅದು ಕಾಫಿನಾಡು ಚಂದು.
ಕಾಫಿನಾಡು ಚಂದು ನಂತರ ಈಗ ಹೆಚ್ಚು ಸುದ್ದಿಯಲ್ಲಿರುವುದು ಎಂದರೆ ಅದು ಬಿಗ್ಬಾಸ್ ಓಟಿಟಿ. ಇಂದಿನಿಂದ ವೂಟ್ ಆಯಪ್ನಲ್ಲಿ ಬಿಗ್ಬಾಸ್ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಾವಾಗ ಈ ಶೋ ಆರಂಭವಾಗಲಿದೆ, ಯಾರೆಲ್ಲಾ ಮನೆಯೆ ಒಳಗೆ ಹೋಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ನಿನ್ನೆಯಿಂದಲೇ ಹಲವಾರು ಜನರ ಹೆಸರು ಕೇಳಿ ಬರುತ್ತಿದೆ. ಅಲ್ಲದೇ, ಬಿಗ್ಬಾಸ್ ಆರಂಭವಾಗುತ್ತಿರುವ ಮಾಹಿತಿ ಹೊರ ಬಂದ ನಂತರ ಕೆಲವರು ಕಾಫಿನಾಡು ಚಂದು ಬಿಗ್ಬಾಸ್ ಮನೆಗೆ ಹೋಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇದೀಗ ಕೇಳಿ ಬರುತ್ತಿರುವ ಸುದ್ದಿ ಎಂದರೆ ಕಾಫಿನಾಡು ಚಂದು ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ.
ಹೌದು, ಈ ಬಾರಿ ಬಿಗ್ಬಾಸ್ ಓಟಿಟಿ ಮೊದಲ ಸೀಸನ್ ಆರಂಭವಾಗುತ್ತಿದೆ, ಸ್ವಲ್ಪ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಅಲ್ಲದೇ, ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಸಹ ಈ ಬಾರಿ ಯಾವುದೇ ರೀತಿ ಕಡಿಮೆಯಾಗಲ್ಲ ಎನ್ನುವುದು ಸತ್ಯ. ಹಾಗಾಗಿ ಅಭಿಮಾನಿಗಳ ನಿರೀಕ್ಷೆಯಂತೆ ಕಾಫಿನಾಡು ಚಂದು ಬಿಗ್ಬಾಸ್ ಮನೆಗೆ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಚಂದು ಎಂಟ್ರಿ ಪಕ್ಕವಂತೆ. ಅದೇನೇ ಇರಲಿ ಇಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದ್ದು, ಯಾರೆಲ್ಲಾ ಮನೆಯ ಒಳಗೆ ಹೋಗಲಿದ್ದಾರೆ ಎನ್ನುವುದು ತಿಳಿಯುತ್ತದೆ.
ಯಾರಿದು ಚಂದು?
ಈ ಕಾಫಿ ನಾಡು ಚಂದು ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್. ನೀವು ಯಾವುದೇ ಮೀಮ್ ಪೇಜ್ , ಟ್ರೋಲ್ ಪೇಜ್ ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ. ಈಗ ಸುದ್ದಿ ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಾಫಿನಾಡು ಚಂದು ಇನ್ಸ್ಟಾಗ್ರಾಮ್ ಸಹ ಹವಾ ಎಬ್ಬಿಸಿದ್ದಾರೆ.
ಈ ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ. ಇವರು ಫೇಮಸ್ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್ ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್ ಪಡೆಯುತ್ತದೆ.
ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ. ಅವರ ವಿಡಿಯೊ ನೋಡಿ ಕೆಲವು ಯೂಟ್ಯೂಬರ್ಗಳು ರೋಸ್ಟ್ ಮಾಡಿದ್ದು, ಇದು ಜನರ ಕುತೂಹಲಕ್ಕೆ ಕಾರಣವಾಗಿ ಅವರನ್ನು ಹುಡುಕಿ ಫುಲ್ ಫೇಮಸ್ ಮಾಡಿದ್ದಾರೆ. ಮತ್ತೊಂದು ವಿಶೇಷ ವಿಚಾರ ಎಂದರೆ ಕೆಲವೇ ದಿನಗಳಲ್ಲಿ 1.5 ಲಕ್ಷ ಫಾಲೋವರ್ಸ್ ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಗಳಿಸಿದ್ದಾರೆ.