
ಆಲ್ಟ್ ಬಾಲಾಜಿ ಕಂಪನಿಯು ಆರಂಭಿಸಿರುವ ಕಾರ್ಟೆಲ್ ವೆಬ್ಸಿರೀಸ್ನಲ್ಲಿ ಬಿಗ್ ಬಾಸ್ ಖ್ಯಾತಿಯ ಈ ನಟಿಯು ವಯೋವೃದ್ಧರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಮೇಕಪ್, ದೇಹದ ಹಾವಭಾವಗಳ ಬದಲಾವಣೆಗೆ ಇನ್ಸ್ಟಾಗ್ರಾಮ್ ಬಳಕೆದಾರರು ದಿಗ್ಭ್ರಾಂತರಾಗಿದ್ದಾರೆ. ಬಿಗ್ಬಾಸ್ ಒಟಿಟಿ ಸೀಸನ್ 1 ವಿಜೇತೆ ದಿವ್ಯಾ ಅಗರ್ವಾಲ್.

ತಮ್ಮ ನಟನೆಯ ಮೊದಲ ವೆಬ್ಸಿರೀಸ್ನಲ್ಲೇ ದಿವ್ಯಾ ಅವರ ಈ ಪ್ರಯೋಗಾತ್ಮಕ ಸಾಹಸಕ್ಕೆ ಅನೇಕ ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೈಗೊಂದು ಕಪ್ಪು ದಾರ, ಕಡಗ, ಕಪ್ಪನೆಯ ದೊಡ್ಡ ಕನ್ನಡಕ, ಬಿಳಿ ಕೂದಲು, ಹಣೆಯ ಮೇಲೆ ಸುಕ್ಕಾಗಿರುವ ಚರ್ಮದ ಮೇಕಪ್ ಹಾಕಿರುವ ಅವರ ಫೋಟೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಿವ್ಯಾ ಹಂಚಿಕೊಂಡಿದ್ದಾರೆ.
ನಿಶಾಂತ್ ಭಟ್ ವಿರುದ್ಧ ಸ್ಪರ್ಧಿಸಿ ಬಿಗ್ಬಾಸ್ ಒಟಿಟಿ ಸೀಸನ್ನಲ್ಲಿ ದಿವ್ಯಾ ಜಯಗಳಿಸಿದ್ದರು. ಅಕ್ಟೋಬರ್ 2 ರಿಂದ ಬಿಗ್ಬಾಸ್ 15ನೇ ಸೀಸನ್ ಆರಂಭಗೊಳ್ಳಲಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇದರ ನಿರೂಪಣೆಗೆ ಸಿದ್ಧತೆ ಶುರು ಮಾಡಿದ್ದಾರೆ.









