Tuesday, September 1, 2026
spot_imgspot_img
spot_imgspot_img

ಬಿಟ್​ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್; ಇಬ್ಬರನ್ನೂ ವಿಚಾರಣೆ ನಡೆಸಿದ ಪೊಲೀಸರು

- Advertisement -
- Advertisement -

ಬೆಂಗಳೂರು: ಬಿಟ್​ ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್ ಹಿನ್ನೆಲೆ ಆಡಿಯೋ ಬಗ್ಗೆ ಸಿಐಡಿ ಸೈಬರ್ ಕ್ರೈಮ್ ತನಿಖೆ ನಡೆಸಿದೆ. ಪೊಲೀಸ್​ ಸಿಬ್ಬಂದಿ ಚರ್ಚಿಸಿದ ಆಡಿಯೋ ವೈರಲ್ ಹಿನ್ನೆಲೆ ತನಿಖೆಯಲ್ಲಿ ಆಡಿಯೋದಲ್ಲಿನ ಸತ್ಯಾಸತ್ಯತೆ ಬಹಿರಂಗಪಡಿಸಲಾಗಿದೆ. ಸಿಐಡಿಯ ಓರ್ವ ಕಾನ್ಸ್​ಟೇಬಲ್, ಇನ್ಸ್​​ಪೆಕ್ಟರ್​​ ಚರ್ಚೆ ಮಾಡಿದ್ದಾರೆ. 6 ತಿಂಗಳ ಹಿಂದೆ ನಿವೃತ್ತಿ ಆದ ಇನ್ಸ್​​ಪೆಕ್ಟರ್ ಮಧ್ಯೆ ಚರ್ಚೆ ನಡೆದಿದೆ. ಇಬ್ಬರನ್ನೂ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.

ಬಿಟ್ ಕಾಯಿನ್ ಹೆಚ್ಚು ಚರ್ಚೆಯಲ್ಲಿರುವುದರಿಂದ ಮಾತು ಬಂದಿದೆ. ಚರ್ಚೆಯಲ್ಲಿದ್ದರಿಂದ ಮಾತನಾಡಿದ್ದಾಗಿ ಇಬ್ಬರಿಂದ ಹೇಳಿಕೆ ನೀಡಲಾಗಿದೆ. ಸೈಬರ್ ಕ್ರೈಂ ಪೊಲೀಸರು ಹೇಳಿಕೆ ಪಡೆದಿದ್ದಾರೆ.

ಬಿಟ್ ​ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ
ಸರ್ಕಾರದ ವಿರುದ್ಧ ಬಿಟ್ ​ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ. ಹಗರಣ ಸಂಬಂಧ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕ್ರೈಂ, ಕೆ.ಜಿ.ನಗರ, ಅಶೋಕನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು. ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

- Advertisement -

Related news

error: Content is protected !!