Monday, June 30, 2025
spot_imgspot_img
spot_imgspot_img

ಬೆರಳ ಹಿಡಿದು ನಡೆವೇ ನಿನ್ನ ಜೊತೆಯಲಿ…! ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿ ಅರೆಸ್ಟ್

- Advertisement -
- Advertisement -

ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಣದಾಸೆಗೆ ಬಿದ್ದ ಜೋಡಿ ಖತರ್ನಾಕ್ ಕೆಲಸ ಮಾಡಿ ಕಂಬಿ ಎಣಿಸುವಂತಾಗಿದೆ. ಒಂಟಿ ‌ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿಯನ್ನು ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಾಗರಾಜ ಹಾಗೂ ರಮ್ಯಾ ಬಂಧಿತ ದಂಪತಿ. ಬೈಕ್ ಕಳ್ಳನೊಬ್ಬನ ಮೂಲಕ ನಾಗರಾಜ್ ಹಾಗೂ ರಮ್ಯಾಗೆ ಪರಿಚಯ ಆಗಿತ್ತು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ದಿನಕಳೆದಂತೆ ಇಬ್ಬರ ನಡುವೆ ಪ್ರೇಮಾಂಕುವಾಗಿ ಮದುವೆಯಾಗಿದ್ದರು.

ಮದುವೆಯಾದ ಬಳಿಕ ಇಬ್ಬರು ಒಟ್ಟಿಗೆ ಕಳ್ಳತನ ಮಾಡಲು ಆರಂಭಿಸಿದರು. ಒಂಟಿ ಮನೆಗಳನ್ನು ಗುರಿಯಾಗಿರಿಸಿ ದೋಚುತ್ತಿದ್ದರು. ಬಂಧಿತರಿಂದ 5.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!