Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ: ಆಯಿಲ್‌ಮಿಲ್‌ಗೆ ನುಗ್ಗಿ ನಗದು ದೋಚಿದ ಖದೀಮರು

- Advertisement -
- Advertisement -

ಬೆಳ್ತಂಗಡಿ: ಆಯಿಲ್‌ಮಿಲ್ ಗೆ ನುಗ್ಗಿ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ಪೋಲಿಸ್ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿರುವ ಏಂಜಲ್ ಸ್ಟೋರ್ ಆದ ಗಿರಣಿ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು ಹಿಂಬದಿಯ ಕಿಟಕಿ ಮುರಿದು ಕಬ್ಬಿಣದ ರಾಡ್ ಎಬ್ಬಿಸಿ ಒಳನುಗ್ಗಿ ಡ್ರಾಯರ್‌ನಲ್ಲಿದ್ದ ಸುಮಾರು 25,000 ರೂಪಾಯಿಗಳನ್ನು ಎಗರಿಸಿದ್ದಾರೆ.

ಆದಿತ್ಯವಾರ ಬೆಳ್ತಂಗಡಿ ಅಂಗಡಿ ಬಾಗಿಲು ತೆರೆದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ ಎಂದು ಬೆಳ್ತಂಗಡಿ ಪೋಲಿಸರಿಗೆ ಅಂಗಡಿ ಮಾಲೀಕರಾದ ಆದರ್ಶ ಎ.ಜೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಪೋಲಿಸರು ಭೇಟಿ ನೀಡಿ, ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ , ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!