- Advertisement -
- Advertisement -


ಬೆಳ್ತಂಗಡಿ: ಶ್ರೀ ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಬಗ್ಗೆ ಜಸ್ಟ್ ಜಿಹಾದಿ ಥಿಂಗ್ಸ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ಫೋಟೋವನ್ನು ಹಾಕಿ “ಗುರುದೇವ ಕಾಲೇಜಿನಲ್ಲಿ ಲವ್ ಜಿಹಾದ್ ಕೇಸ್’ಗಳು ತುಂಬಾನೇ ಕಾಣಸಿಗುತ್ತಿವೆ. ಏನಿದು ಅವಸ್ಥೆ” ಎನ್ನುವ ಬರಹದ ಪೋಸ್ಟರ್ ಒಂದು ವೈರಲ್ ಆಗಿತ್ತು.

ಇದನ್ನು ಗಮನಿಸಿದ ಶಿಕ್ಷಣ ಸಂಸ್ಥೆ ಸೈಬರ್ ಕ್ರೈಂ ವಿಭಾಗದಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಕಾಲೇಜಿನ ಬಗ್ಗೆ ಮಾನಹಾನಿಕರ ಬರಹದ ಮೂಲಕ ಅಪಪ್ರಚಾರ ನಡೆದಿದೆ. ತನಿಖೆಯ ಮೂಲಕ ನಕಲಿ ಖಾತೆಯನ್ನು ಹಾಗೂ ನಕಲಿ ಖಾತೆ ನಿರ್ವಾಹಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಂಸ್ಥೆ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ದ.ಕ ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ಲಿಖಿತ ದೂರು ದಾಖಲಿಸಿದ್ದು ತನಿಖೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.





- Advertisement -