Monday, September 28, 2026
spot_imgspot_img
spot_imgspot_img

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ವಕೀಲ ರಾಜೇಶ್ ಭಟ್ ನ ಪತ್ನಿ ಮತ್ತು ಮತ್ತಿಬ್ಬರ ಬಂಧನ

- Advertisement -
- Advertisement -
vtv vitla
vtv vitla

ಮಂಗಳೂರು:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ನನ್ನೂ ಕೂಡ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿ ವಕೀಲ ಕೆ.ಎಸ್‌.ಎನ್‌. ರಾಜೇಶ್‌ ಭಟ್‌ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಅ.18ರಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.

ರಾಜೇಶ್ ಭಟ್‌ಗೆ ಸಹಕಾರ ನೀಡಿದ್ದ ಆರೋಪದ ಮೇಲೆ ಈ ಹಿಂದೆ ಅನಂತ ಭಟ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಮಧ್ಯೆ ಮತ್ತೋರ್ವ ಆರೋಪಿ ಅಚ್ಯುತ ಭಟ್ ಮತ್ತು ಆತನ ಪುತ್ರ ಅಲೋಕ್ ಎಂಬಾತ ಕೂಡ ಆರೋಪಿ ರಾಜೇಶ್ ಭಟ್‌ಗೆ ನೆರವು ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ಅಚ್ಚುತ ಭಟ್‌ನ ಮಗ ಆಲೋಕ್ ಮತ್ತು ರಾಜೇಶ್ ಭಟ್‌ನ ಪತ್ನಿಯನ್ನೂ ಕೂಡಾ ಬಂಧಿಸಿದ್ದಾರೆ. ಈಕೆ ಆರೋಪಿ ಪತಿಗೆ ಸಹಕಾರ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!