Wednesday, July 29, 2026
spot_imgspot_img
spot_imgspot_img

ಮಂಗಳೂರು: ಗೆಳೆಯರ ಜೊತೆ ಬೀಚ್ ಗೆ ಬಂದ ಬೆಂಗಳೂರಿನ ಯುವಕ ಸಮುದ್ರಪಾಲು!

- Advertisement -
- Advertisement -

ಮಂಗಳೂರು: ಇಲ್ಲಿನ ಪಣಂಬೂರು ಬೀಚ್ ನಲ್ಲಿ ವಿಹಾರಕ್ಕೆಂದು ಬಂದ ಯುವಕನೋರ್ವ ಸಮುದ್ರಪಾಲಾದ ಘಟನೆ ಸೋಮವಾರ ನಡೆದಿದೆ.

ಮೃತ ಯುವಕ ಬೆಂಗಳೂರು ಮೂಲದ ದಿನೇಶ್(20) ಎನ್ನಲಾಗಿದೆ. ದಿನೇಶ್ ತನ್ನ ಸ್ನೇಹಿತರಾದ ದೀಪಕ್, ಶ್ರೀನಿವಾಸ, ಪ್ರಶಾಂತ್, ಸುನೀಲ್, ಸುದೀಪ್, ಪ್ರಜ್ವಲ್, ಸೀನಾ ಎಂಬವರೊಂದಿಗೆ ನ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಬೀಚ್ ಗೆ ತೆರಳಿದ್ದರು.

ಈ ಸಂದರ್ಭ ಸ್ನಾನಕ್ಕೆಂದು 8 ಮಂದಿ ಸಮುದ್ರಕ್ಕಿಳಿದಿದ್ದು, ಭಾರೀ ಅಲೆಯೊಂದಕ್ಕೆ ಸಿಲುಕಿ ದಿನೇಶ್ ಕೊಚ್ಚಿ ಹೋಗಿದ್ದಾರೆ. ಈ ವೇಳೆ ತಂಡದ ಇತರರು ಆತನ ರಕ್ಷಣೆಗೆ ಯತ್ನಿಸಿದರೂ ಆತ ಸಮುದ್ರಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!