
ಅನ್ಯಧರ್ಮಿಯರಾದ ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಮುಂದೆ ಪ್ರತಿನಿತ್ಯ ಪತ್ನಿಗೆ ಆತ ಚಿತ್ರಹಿಂಸೆ ಕೊಡಲು ಶುರು ಮಾಡಿದ. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ಹಿಂದೆಯೂ ಲವ್ ಜಿಹಾದ್ ಸಂಚಿದೆಯೇ ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಚಿತ್ರದುರ್ಗ ನಗರದ ನೆಹರು ಬಡಾವಣೆಯಲ್ಲಿ ವಾಸವಿರುವ ಶಿವಮೊಗ್ಗ ಮೂಲದ ಉಮಾ ಮತ್ತು ಚಿತ್ರದುರ್ಗದ ಅಬ್ದುಲ್ ಖಾದರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ವಿವಾಹಿತೆ ಆಗಿದ್ದ ಉಮಾ ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಖಾದರ್ ಉಮಾಳನ್ನು ಮದುವೆ ಆಗಿದ್ದ.

ಮದುವೆಯಾಗಿ ವರ್ಷದ ಬಳಿಕ ಉಮಾಗೆ ಅನಾರೋಗ್ಯದಿಂದ ಎರಡು ಕಾಲುಗಳು ನಿಷ್ಕ್ರಿಯಗೊಂಡು ಹಾಸಿಗೆ ಹಿಡಿದಿದ್ದರು. ಈ ಮಧ್ಯೆ ಕಳೆದ ನಾಲ್ಕು ತಿಂಗಳಿಂದ ಅಬ್ದುಲ್ ಖಾದರ್ ಉಮಾಗೆ ಕಿರುಕುಳ ನೀಡುತ್ತಾ ಧರ್ಮ ನಿಂದನೆ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಲ್ಲೆ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಬ್ದುಲ್ ಖಾದರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸಿಗೆ ಹಿಡಿದ ಉಮಾಳಿಗೆ ಪತಿ ಖಾದರ್ ಉಸಿರುಗಟ್ಟಿಸಿ ಹತ್ಯೆ ಮಾಡುವುದಾಗಿ ಬೆದರಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಕಳೆದ 6-7ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಉಮಾಳಿಗೆ ಖಾದರ್ ಚಿತ್ರ ವಿಚಿತ್ರವಾಗಿ ಕಿರುಕುಳ ನೀಡುತ್ತಿದ್ದು, ನ.16ರ ಸಂಜೆ ಕುಡಿದು ಬಂದು ಪತ್ನಿಯ ಗುಪ್ತಾಂಗಕ್ಕೆ ಕಾಲಿನಿಂದ ಜಾಡಿಸಿ ಒದ್ದಿದ್ದಾನೆ. ಈ ವೇಳೆ ಪೊಲೀಸ್ ಸ್ಟೇಶನ್‌ಗೆ ದೂರು ನೀಡುವುದಾಗಿ ಉಮಾ ಹೇಳಿದಾಗ ಮತ್ತಷ್ಟು ತೀವ್ರವಾಗಿ ಹಲ್ಲೆ ನಡೆಸಿದ್ದನಂತೆ. ಉಮಾ ತನ್ನ ದೂರದ ಸಂಬಂಧಿ ವಿಶ್ವನಾಥ್ ಎಂಬುವವರಿಗೆ ನಡೆದ ವಿಚಾರವನ್ನೆಲ್ಲ ಹೇಳಿ, ಅವರ ಮೂಲಕ ಪೊಲೀಸರ ನೆರವು ಪಡೆದಿದ್ದಾರೆ. ಗಂಭೀರ ಗಾಯಗೊಂಡ ಉಮಾರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೈಹಿಕ, ಮಾನಸಿಕ ಹಿಂಸೆ, ಜಾತಿ ನಿಂದನೆ, ಮತಾಂತರ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಸಂಚಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
- ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 13 ಸೈನಿಕರು ಸಾವು, 29 ಮಂದಿಗೆ ಗಾಯ
- ಸುಹಾಸ್ ಶೆಟ್ಟಿ ಹತ್ಯೆ: ವಿದೇಶದಿಂದ ಹಣದ ನೆರವು
- ಪುತ್ತೂರು: ರಸ್ತೆಗೆ ಬಿದ್ದ ಬೃಹತಾಕಾರದ ಮರ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ…!
- ಎಚ್ಚರಿಕೆ..!ಸೈಬರ್ ಅಪರಾಧಿಗಳು ನೀಡುವ ಹೂಡಿಕೆ, ಉದ್ಯೋಗವಕಾಶಗಳ ಮೋಸದ ಬಲೆಗೆ ಬೀಳಬೇಡಿ
- ಚಂದಳಿಕೆ ಶಾಲೆಯಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ
