Thursday, April 25, 2024
spot_imgspot_img
spot_imgspot_img

ರಿಷಿ ಸುನಕ್ ಗೆ ಯು ಕೆ ಪಬ್ ಜೀವನ ಪರ್ಯಂತ ನಿಷೇಧ ಹೇರಿಕೆ

- Advertisement -G L Acharya panikkar
- Advertisement -

ಲಂಡನ್​: ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಊಟ ವಿಸ್ತರಣೆ ಯೋಜನೆ ವಿರುದ್ಧವಾಗಿ ಮತ ಚಲಾಯಿಸಿದ್ದಕ್ಕೆ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ, ಯುಕೆ ಸಚಿವ​ ರಿಷಿ ಸುನಕ್ ಅವರಿಗೆ ಯುಕೆ ಪಬ್​​ ಜೀವನ ಪರ್ಯಂತ ನಿಷೇಧ ಹೇರಿದೆ.


ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ಹಣಕಾಸು ಸಚಿವರಾಗಿರುವ ರಿಷಿ ಸುನಕ್​ ಮಾತ್ರವಲ್ಲದೆ ಅವರದೇ ಸಂಪುಟದ ದಕ್ಷಿಣ ಇಂಗ್ಲೆಂಡ್​ನ ಮೂವರು ಸಂಸದರಿಗೂ ನಿಷೇಧ ವಿಧಿಸಲಾಗಿದೆ. ರಿಷಿ ಸುನಕ್ ಅವರ ರಿಚ್​ಮಂಡ್​ (ಯಾರ್ಕ್ಸ್​) ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ​ ನಾರ್ಥ್​ ಯಾರ್ಕ್​ಸೈರ್​ನ ಸ್ಟೊಕೆಸ್ಲೇಯಲ್ಲಿರುವ​ ಐಎಲ್ ಮುಲಿನೋ ರೆಸ್ಟೋರೆಂಟ್​ ನಿಷೇಧ ಹೇರಿದೆ.

ಇಂಗ್ಲೆಂಡ್​ ಟೀಮ್​ ಫುಟ್​ಬಾಲರ್​ ಮಾರ್ಕಸ್​ ರಾಸ್​ಫೋರ್ಡ್​ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಸರ್ಕಾರದ ತಾತ್ಕಾಲಿಕ ಉಚಿತ ಊಟದ ಯೋಜನೆಯ ವಿಸ್ತರಣೆ ಕುರಿತು ಬಹುದೊಡ್ಡ ಅಭಿಯಾನವೇ ನಡೆಯಿತು.ಇದೇ ವಿಚಾರವಾಗಿ ವಾರದ ಆರಂಭದಲ್ಲೇ ಲಂಡನ್​ನ ಹೌಸ್​ ಆಫ್​ ಕಾಮನ್​ನಲ್ಲಿ ಚರ್ಚೆಯು ನಡೆಯಿತು. ಈ ವೇಳೆ ರಿಷಿ ಸುನಕ್ ಸೇರಿದಂತೆ ತಮ್ಮದೇ ಸರ್ಕಾರದ ಕೆಲ ಸದಸ್ಯರು​ ಉಚಿತ ಊಟದ ವಿರುದ್ಧವಾಗಿ ಮತ ಚಲಾಯಿಸಿದ್ದರು.ಇದರಿಂದ ಅಸಮಾಧಾನಗೊಂಡಿರುವ ದಿ ಮಿಲ್​ ಆಯಂಡ್​ ಮುಲಿನೋ ರೆಸ್ಟೋರೆಂಟ್​ ಮಾಲೀಕ ಅಲೆಕ್ಸ್​ ಕೂಕ್​, ರಿಷಿ ಸುನಕ್​, ಮ್ಯಾಟ್​ ವಿಕ್ಕರ್ಸ್​, ಸಿಮನ್​ ಕ್ಲರ್ಕ್​ ಮತ್ತು ಜಾಕೋಬ್​ ಅವರನ್ನು ತಮ್ಮ ಪಬ್​ನಿಂದ ಜೀವನ ಪರ್ಯಂತ ನಿಷೇಧ ಹೇರಿದ್ದಾರೆ. ನಮಗಿನ್ನೂ ಅವರರೊಂದಿಗೆ ಯಾವುದೇ ವ್ಯವಹಾರ ಬೇಡವೆಂದು ಹೇಳಿದ್ದಾರೆ.

ಪ್ರತಿಯೊಂದು ಚರ್ಚೆಯು ತಪ್ಪು ನಿರ್ಧಾರದಲ್ಲಿ ಅಂತ್ಯವಾಗುವ ಸರ್ಕಾರವೆಂದು ತಿಳಿದಿರಲಿಲ್ಲ. ಕೋವಿಡ್​ ವಿರುದ್ಧ ಕಳಪೆ ನಿರ್ವಹಣೆಯನ್ನು ಮರೆತುಬಿಡಿ ಆದರೆ, ನಿನ್ನೆ ಏನಾಗಿದೆ ಎಂದು ನೆನಪಿನಲ್ಲಿಡಿ ಎಂದು ಸರ್ಕಾರದ ವಿರುದ್ಧ ಕುಕ್​ ಹರಿಹಾಯ್ದಿದ್ದಾರೆ.

ಸರ್ಕಾರ 61 ಮತಗಳಿಂದ ಜಯಸಿದ್ದರೂ ಸಹ ಮೂರು ಪ್ರತ್ಯೇಕ ಆಹಾರ ಬ್ಯಾಂಕ್​ಗಳಿಗೆ ಮುಂದಿನ ವಾರದಲ್ಲಿ ಆರೋಗ್ಯಯುತ ಆಹಾರವನ್ನು ವಿತರಿಸುವುದಾಗಿಯು ಹೇಳಿದ್ದಾರೆ. ಇದೇ ವೇಳೆ ಸರ್ಕಾರ ನಿರ್ಧಾರದ ಬಗ್ಗೆ ಮಾತನಾಡಿ ನಿಮಗೆ ನಾಚಿಕೆಯಾಗಬೇಕು. ಇದು ನಿಜಕ್ಕೂ ತಪ್ಪು ನಿರ್ಧಾರ ಎಂದು ಜರಿದಿದ್ದಾರೆ.

- Advertisement -

Related news

error: Content is protected !!