Friday, September 4, 2026
spot_imgspot_img
spot_imgspot_img

ಮಲ್ಪೆ: ಹಂಪ್ಸ್ ಕಂಡು ಏಕಾಏಕಿ ಬ್ರೇಕ್ ಹಾಕಿದ ಮಗ; ರಸ್ತೆಗೆ ಬಿದ್ದು ತಾಯಿ ಮೃತ

- Advertisement -
- Advertisement -

ಮಲ್ಪೆ : ರಸ್ತೆಯ ಮಧ್ಯ ಹಂಪ್ ನಲ್ಲಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಲ್ಲಿ ಸಹಸವಾರರಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕೆಮ್ಮಣ್ಣು ಚರ್ಚ್ ಎದುರು ಸಂಭವಿಸಿದೆ.

ಮೃತರನ್ನು ಕೊಡವೂರಿನ ಗಂಗಾ ಎಂದು ಗುರುತಿಸಲಾಗಿದೆ. ಇವರು ಮೂಲಾಸ್ಥಾನ ಬೇಂಗ್ರೆ ಹೂಡೆಗೆ ಹೋಗಲು ಮಗ ಆಕರ್ಷ್‌ನ ಮೋಟಾರ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೆಮ್ಮಣ್ಣು ಚರ್ಚ್ ಎದುರು ಈ ದುರ್ಘಟನೆ ಸಂಭವಿಸಿದೆ.

ಹಂಪ್ಸ್ ಎದುರು ಆಕರ್ಷ್ ಒಮ್ಮೆಗೇ ‌ಬ್ರೇಕ್ ಹಾಕಿದ್ದರಿಂದ ಗಂಗಾ ರಸ್ತೆಗೆ ಬಿದ್ದರು. ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!