

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹಿಂದೂಗಳ ಫೇವರೇಟ್. ಯಾಕಂದ್ರೆ ಕೋಮು ಗಲಭೆ ಆದಲ್ಲಿ ಅದನ್ನು ಹಿಂಸಾತ್ಮಕ ರೀತಿಯಲ್ಲಿಯೇ ಬಗೆಹರಿಸುತ್ತಾರೆ. ದಂಡಕ್ಕೆ ದಂಡವೇ ಅಸ್ತ್ರ ಎಂಬಂತಿದೆ ಇಲ್ಲಿನ ಪರಿಸ್ಥಿತಿ. ಏನೇ ಒಳ್ಳೆಯ ಕೆಲಸ ಮಾಡಿದ್ರೂ ಯೋಗಿ ಆದಿತ್ಯನಾಥ್ ಅವರನ್ನು ಅನ್ಯಕೋಮಿನವರೂ ದ್ವೇಷಿಸುತ್ತಾ ಇರುತ್ತಾರೆ. ಆದ್ರೆ ಇಲ್ಲೊಬ್ಬ ಮುಸ್ಲಿಂ ಯುವಕ ಯೋಗಿಯವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿದ್ದಾನೆ.
23 ವರ್ಷ ವಯಸ್ಸಿನ ಯಮೀನ್ ಸಿದ್ದಿಖಿ ತನ್ನ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಯೋಗಿ ತನ್ನ ಮಾದರಿ ವ್ಯಕ್ತಿ ಎಂದು ಹೇಳಿಕೊಂಡಿರುವ ಆತ, ಯೋಗಿ ಅವರ ಜನ್ಮದಿನ ಪ್ರಯುಕ್ತ ಹಚ್ಚೆ ಹಾಕಿಸಿಕೊಂಡಿದ್ದಾಗಿ ಹೇಳಿದ್ದಾನೆ. ಉತ್ತರ ಪ್ರದೇಶದ ಮೈನ್ಪುರಿ ಮತ್ತು ಫರುಖಾಬಾದ್ ಜಿಲ್ಲೆಗಳ ಗಡಿ ಭಾಗದ ಹಳ್ಳಿಯಲ್ಲಿ ಸಿದ್ದಿಖಿ ವಾಸಿಸುತ್ತಿದ್ದು, ಪಾದರಕ್ಷೆಗಳ ವ್ಯಾಪಾರ ನಡೆಸುತ್ತಿದ್ದಾನೆ. ಯೋಗಿ ಅವರ ಹಚ್ಚೆ ಹಾಕಿಸಿಕೊಂಡಾಗಿನಿಂದ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದರೂ, ಆ ಬಗ್ಗೆ ತಲೆ ಕಡೆಸಿಕೊಂಡಿಲ್ಲ ಎಂದು ಸಿದ್ದಿಖಿ ಹೇಳಿರುವುದಾಗಿ ವರದಿಯಾಗಿದೆ.
ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಅವರಿಗೆ ಹಚ್ಚೆ ತೋರಿಸುವ ಆಸೆಯಿದೆ. ಅವರ ಮೇಲೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ತಂದಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಎಲ್ಲರೂ ಎಲ್ಲ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ, ಅದರಲ್ಲಿ ಯಾವುದೇ ತಾರತಮ್ಯ ಇಲ್ಲ’ ಎಂದು ಸಿದ್ದಿಖಿ ಹೇಳಿದ್ದಾನೆ.
- ಮೂಡುಬಿದಿರೆಯಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ನಿವೃತ್ತ ಶಿಕ್ಷಕ ಸಾವು
- ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ ಪ್ರಕರಣ– ಆರೋಪಿ ಬಂಧನ
- ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ
- ದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ನಟ ಸಲ್ಮಾನ್ ಖಾನ್ ಬೆಂಬಲ
- ಬೆಂಗಳೂರು: ಪಿಜಿಯಲ್ಲಿ ಸಿಲಿಂಡರ್ ಬ್ಲಾಸ್ಟ್ – 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ










