Sunday, June 21, 2026
spot_imgspot_img
spot_imgspot_img

ಮೂಡುಬಿದಿರೆ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ; ಐದು ದನಗಳ ರಕ್ಷಣೆ: ಆರೋಪಿ ಎಸ್ಕೇಪ್‌

- Advertisement -
- Advertisement -

ಮೂಡುಬಿದಿರೆ: ಗುಡ್ಡಗಾಡು ಪ್ರದೇಶದಲ್ಲಿದ್ದ ಅಕ್ರಮವಾಗಿ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ಐದು ದನಗಳನ್ನು ರಕ್ಷಿಸಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಎಂಬಲ್ಲಿ ನಡೆದಿದೆ.

ಹಂಡೇಲು ನಿವಾಸಿ ಹಸನ್‌ಬಾವ ಎಂಬಾತ ಕುಟುಂಬಸ್ಥರ ಜೊತೆ ಕಸಾಯಿಖಾನೆ ನಡೆಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ನಿರಂಜನ್ ಕುಮಾರ್, ಉಪನಿರೀಕ್ಷಕರರಾದ ಸುದೀಪ್, ಸಿದ್ದಪ್ಪ , ದಿವಾಕರ್ ರೈ ಸಹಿತ ಸಿಬ್ಬಂದಿ ದಾಳಿ ನಡೆಸಿದ್ದು, ಐದು ದನಗಳು, ದನದ ಚರ್ಮ, ಅವುಗಳ ವಧೆಗೆ ಬಳಸುತ್ತಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.

ನಿರ್ಜನ ಹಾಗೂ ಅಕ್ರಮವಾಗಿ ಕಸಾಯಿಖಾನೆ ನಡೆಸಲು ಪೂರಕ ಪ್ರದೇಶವನ್ನು ಆರೋಪಿ ನಿರ್ಮಿಸಿದ್ದು, ಗುಡ್ಡದ ಬಳಿ ಇದ್ದ ತನ್ನ ಮನೆಯಿಂದಲೇ ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿದ್ದ ಎನ್ನುವ ಅಂಶವು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿ ಹಸನ್ ಬಾವ ವಿರುದ್ಧ 2021ರಲ್ಲಿ ಅಕ್ರಮವಾಗಿ ದನದ ಮಾಂಸ ಇರಿಸಿದ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!