Sunday, June 21, 2026
spot_imgspot_img
spot_imgspot_img

ರಜೆ ಮುಗಿಸಿ ವಿದೇಶಕ್ಕೆ ತೆರಳಿದ್ದ ಮರುದಿನವೇ ಯುವಕ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಕೇರಳ: ಒಂದು ತಿಂಗಳ ರಜೆ ಕಳೆದು ಮತ್ತೆ ಉದ್ಯೋಗಕ್ಕೆ ವಿದೇಶಕ್ಕೆ ತೆರಳಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮಯ್ಯನ್ನೂರು ಅಂಗಡಿ ಮುಕೋಳ ಭಾಗದ ಚೆರಿಯಪರಂಬ ನಿವಾಸಿ ಝಾಕೀರ್(33)ಮೃತ ಯುವಕ.ಝಾಕೀರ್ ದುಬೈಗೆ ತೆರಳಿದ ಮರುದಿ‌ನ ನಿದ್ರಾವಸ್ಥೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

ತನ್ನ ಹಿರಿಯ ಮಗ ಸಹಿತ ವಿದೇಶದಲ್ಲಿರುವ ಝುಕೀರ್ ರವರು ಎರಡು ದಿನಗಳ ಹಿಂದೆಯಷ್ಟೇ ಊರಿನಿಂದ ಮರಳಿ ವಿದೇಶಕ್ಕೆ ಮರಳಿದರು. ಊರಿನಿಂದ ಬಂದ ಮರುದಿನ ಬೆಳಿಗ್ಗೆಯಾದರು ಝಕೀರ್ ಏದ್ದೇಳದ ಇದ್ದಾಗ ಮರಣ ಹೊಂದಿದ್ದು, ದೃಢವಾಗುತ್ತದೆ.

ಝಾಕೀರ್ ರವರು ಮರಳುವ ಸಂದರ್ಭದಲ್ಲಿ ಕೊನೆಯ ಬಾರಿಗೆ ತನ್ನ ತಾಯಿಯ ಕೈಯಿಂದ ಊಟ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನನ್ನ ತಾಯಿ ಪ್ರೀತಿಯಿಂದ ತನ್ನ ಮಗನಿಗೆ ಊಟ ಮಾಡಿಸುವ ವೀಡಿಯೋ ಎಲ್ಲರನ್ನು

ಕಣ್ಣೀರಿನಲ್ಲಿ ಮುಳುಗಿಸಿದೆ. ವರದಿ ಪ್ರಕಾರ ವಿಡಿಯೋವನ್ನು ಝಾಕೀರ್ ಪುತ್ರ ಸೆರೆ ಹಿಡಿದಿದ್ದಾನೆ.‌ವಿಡಿಯೋ ಝಾಕೀರ್ ದುಬೈಗೆ ಹೊರಡುವ ಮೊದಲ ಕ್ಷಣದ್ದು ಎನ್ನಲಾಗಿದೆ.

- Advertisement -

Related news

error: Content is protected !!