Friday, August 28, 2026
spot_imgspot_img
spot_imgspot_img

ವಾಕಿಂಗ್‌ ಮಾಡಿ ವಾಪಸ್ ಬರುತ್ತಿದ್ದಾಗ ಹೃದಯಾಘಾತ; ಕುಸ್ತಿಪಟು ದರ್ಮರಣ

- Advertisement -
- Advertisement -

ತೀವ್ರ ಹೃದಯಾಘಾತದಿಂದ ಯುವ ಕುಸ್ತಿಪಟುವೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ದೊಡವಾಡ ಗ್ರಾಮದ ಪೈಲ್ವಾನ್ ಸಂಗಪ್ಪ ಬಳಿಗೇರ್(28) ಮೃತ ವ್ಯಕ್ತಿ.

ಇಂದು ಮುಂಜಾನೆ ವಾಕಿಂಗ್‍ಗೆ ತೆರಳಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಧಾರವಾಡದ ಮದಿಹಾಳದ ಬಳಿ ತನ್ನ ಗೆಳೆಯನ ಜೊತೆಗೆ ಸಂಗಪ್ಪ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಠಾತ್ ಹೃದಯಾಘಾತವಾಗಿದ್ದು, ಕುಸಿದುಬಿದ್ದು ಅವರು ಸಾವನ್ನಪ್ಪಿದ್ದಾರೆ.

ವಾಕಿಂಗ್ ಮಾಡಿ ಮನೆಗೆ ವಾಪಸ್ ಬರುತ್ತಿದ್ದಾಗಲೇ ಕುಸ್ತಿಪಟು ಸಂಗಪ್ಪನಿಗೆ ಹೃದಯಾಘಾತವಾಗಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!