Monday, August 10, 2026
spot_imgspot_img
spot_imgspot_img

ವಾಯುಪಡೆಯ ತರಬೇತಿ ವಿಮಾನಗಳು ಪರಸ್ಪರ ಡಿಕ್ಕಿ; ಮೂವರು ಪೈಲೆಟ್ ಗಳು ಸಾವು

- Advertisement -
- Advertisement -

ವಾಯುಪಡೆಯ ಎರಡು ತರಬೇತಿ ವಿಮಾನಗಳು ಹಾರಾಟ ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾದ ಕಾರಣ ಮೂವರು ಪೈಲಟ್‌ಗಳು ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

ಆಗ್ನೇಯ ನಗರದ ಸಚೆನ್‌ನಲ್ಲಿ ಇಂದು ಮಧ್ಯಾಹ್ನ 1:35 ಕ್ಕೆ (0435 GMT) KT-1 ವಿಮಾನಗಳ ನೆಲೆಯ ಬಳಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದುರಂತದಲ್ಲಿ ಮೂವರು ಪೈಲಟ್‌ಗಳು ಮೃತಪಟ್ಟಿದ್ದು, ಒಬ್ಬರು ಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳನ್ನು ಮಾಹಿತಿ ನೀಡಿದ್ದಾರೆ. 30 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಅಪಘಾತದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!