Friday, August 7, 2026
spot_imgspot_img
spot_imgspot_img

ವಿಟ್ಲ: 10ನೇ ವಿದ್ಯಾರ್ಥಿನಿ ಆತ್ಮಹತ್ಯೆ; ಬಡ ಕುಟುಂಬಕ್ಕೆ ಆಸರೆಯಾಗಿ ಧೈರ್ಯ ತುಂಬಿದ ವಿಹಿಂಪ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು

- Advertisement -
- Advertisement -
vtv vitla

ವಿಟ್ಲ: ಕನ್ಯಾನದ ಕಾಣಿಯೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡ ಕುಟುಂಬದ 10 ನೇ ತರಗತಿ ವಿದ್ಯಾರ್ಥಿಯೋರ್ವಳು ಅನ್ಯಕೋಮಿನ ಯುವಕನ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ತೀರಾ ಬಡ ಕುಟುಂಬವಾಗಿದ್ದು ಶವಸಂಸ್ಕಾರದ ಹೊಣೆಯನ್ನು ವಿಟ್ಲ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ನೇರವೇರಿಸಿದರು. ವಿಟ್ಲದ ಪಳಿಕೆ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರ ನೆರವೇರಿತು.

ಸಾಹುಲ್ ಹಮೀದ್‌ನಿಂದ ಕಿರುಕುಳ
ಸ್ಥಳೀಯ ಯುವಕನಾಗಿರುವ ಸಾಹುಲ್ ಹಮೀದ್ ಪ್ರೀತಿಯ ನಾಟಕವಾಡಿ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು ಈತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಗಿಯ ಪೋಷಕರು ಮಗಳ ಸಾವಿಗೆ ಕಾರಣವಾದ ಸಾಹುಲ್ ಹಮೀದ್ ಬಗ್ಗೆ ಮಾಹಿತಿ ನೀಡಿದ ಹಿನ್ನಲೆ ಬಜರಂಗದಳ ಕಾರ್ಯಕರ್ತರು ಈ ಬಗ್ಗೆ ವಿಟ್ಲ ಠಾಣಾಧಿಕಾರಿ ಹೆಚ್ ಇ ನಾಗರಾಜ್ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ನೀಡಿದರು.

ವಿಹಿಂಪ ಬಜರಂಗದಳ ಮತ್ತು ಬಿಜೆಪಿ ನಾಯಕರು ಪ್ರತಿಯೊಂದು ಕಾರ್ಯದಲ್ಲೂ ಪೋಷಕರೊಂದಿಗೆ ಸಹಕರಿಸುತ್ತಾ ಅಂತಿಮ ಸಂಸ್ಕಾರ ಕಾರ್ಯವನ್ನು ನೇರವೇರಿಸಿದರು. ಈ ಅನ್ಯಾಯವನ್ನು ಸಹಿಸುವುದಿಲ್ಲ. ಪೋಷಕರಿಗೆ ಮುಂದಿನ ದಿನಗಳಲ್ಲಿ ನಾವಿದ್ದೇವೆ ಎಂದು ಭರವಸೆ ನೀಡಿದರು. ಈ ವೇಳೆ ಬಜರಂಗದಳ ವಿಟ್ಲ ಪ್ರಖಂಡದ ಕಾರ್ಯಕರ್ತರು, ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದಂತೆ ಮೊದಲಾದವರು ಜೊತೆಗಿದ್ದರು.

vtv vitla
- Advertisement -

Related news

error: Content is protected !!